ನವದೆಹಲಿ: ರಷ್ಯಾದ ಮಾಸ್ಕೋದಿಂದ (Moscow) ದೆಹಲಿಗೆ ಬಂದಿಳಿದ ವಿಮಾನದಲ್ಲಿ ಬಾಂಬ್ (Bomb) ಇರುವುದಾಗಿ ತಡರಾತ್ರಿ ಎಚ್ಚರಿಕೆಯ ಇಮೇಲ್ (Email) ಬಂದಿದ್ದು, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಭಾರೀ ಭದ್ರತೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆದರಿಕೆ ಮೇಲ್ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ವಿಮಾನವನ್ನು (Flight) ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಹಿಜಬ್ ಭರವಸೆ ಬಲವಾಗಿದೆ – ನ್ಯಾ. ದುಲಿಯಾ ತೀರ್ಪಿಗೆ ಆಲಿಯಾ ಅಸ್ಸಾದಿ ಮೆಚ್ಚುಗೆ
ಪೊಲೀಸರ (Airport Police) ಪ್ರಕಾರ, ವಿಮಾನವು ಮಾಸ್ಕೋದಿಂದ ಬೆಳಗಿನ ಜಾವ 3:20ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಆದರೆ ಟರ್ಮಿನಲ್ 3ಕ್ಕೆ ಬರುತ್ತಿದ್ದ ವಿಮಾನ ಸಂಖ್ಯೆ SU232ರಲ್ಲಿ ಬಾಂಬ್ ಇರುವುದಾಗಿ ರಾತ್ರಿ 11:55ಕ್ಕೆ ಕರೆ ಬಂದಿತು. ಇದರಿಂದಾಗಿ ಒಟ್ಟು 386 ಹಾಗೂ 16 ಸಿಬ್ಬಂದಿಯನ್ನ ವಿಮಾನದಿಂದ ಕೆಳಗಿಳಿಸಿ ಪರಿಶೀಲಿಸಲಾಯಿತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಕೇಸ್ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ
ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಸೆ.10 ರಂದು ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನಕ್ಕೆ (Air India Flight) ಬಾಂಬ್ ಬೆದರಿಕೆ ಕರೆ ಬಂದಿತ್ತು.