ಬೆಂಗಳೂರು: ಅದೇನೊ ಗಾದೆ ಹೇಳ್ತಾರಲ್ಲ ಇರಲಾರದೇ ಇರುವೆ ಬಿಟ್ಕೊಂಡ್ರು ಅನ್ನೊ ಹಂಗಾಯ್ತು ಈ ಪ್ಯಾಸೆಂಜರ್ ನ ಕಥೆ.
ಸುಮ್ಮನೇ ಇದ್ದಿದ್ದರೇ ಇವತ್ತು ಊರು ಸೇರ್ಕೊಂಡು ನೆಮ್ಮದಿಯಾಗಿರುತ್ತಿದ್ದ. ಆತ ಮಾಡಿದ ಒಂದು ಚೇಷ್ಟೆ ಇದೀಗ ಪೊಲೀಸರ ಅತಿಥಿಯಾಗುವಂತೆ ಮಾಡಿದೆ.
ಹೌದು. ಕಳೆದ ಭಾನುವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ (Kempegowda International Airport) ಕೊಚ್ಚಿ ಗೆ ಹೊರಟಿದ್ದ ಯುವಕ ತನ್ನ ಬ್ಯಾಗ್‌ಚೆಕ್ ಮಾಡೋ ವೇಳೆ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಈ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಅಂದಿದ್ದಾನೆ. ಇದೇನಪ್ಪಾ ಅಂತಾ ಪೊಲೀಸರು ಈತನ ಇಡೀ ಲಗೇಜ್ ಜಾಲಾಡಿದ್ದಾರೆ.
ಬಾಂಬ್ ಬೆದರಿಕೆ (Bomb Threat) ಹಾಕಿದ ಹಿನ್ನೆಲೆಯಲ್ಲಿ ಆಸಾಮಿಯನ್ನ ಬಂಧಿಸಿ, ಅಪರಾಧ ಹಿನ್ನೆಲೆ ಏನಾದ್ರೂ ಇದೆಯಾ ಅನ್ನೋದನ್ನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರ
ನಟ ವಿಷ್ಣು ವಿಶಾಲ್ ಅಭಿನಯದ `FIR’ ತಮಿಳು ಸಿನಿಮಾದಲ್ಲೂ ಇದೇ ರೀತಿಯ ಪ್ರಸಂಗ ನಡೆಯುತ್ತದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ಸುರಿಮಳೆ – ಇಬ್ಬರು ಸಾವು, ಓರ್ವ BJP ಮುಖಂಡನಿಗೆ ಗಂಭೀರ ಗಾಯ