ಬೆಳಗಾವಿ: ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿಪಿ ಶೇಷ ಅವರಿಗೆ ಅನಾಮಧೇಯ ಬೆದರಿಕೆ ಕರೆ ಬಂದಿದ್ದು ಜೈಲು ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ.
ಬೆಂಗಳೂರು ಕಾರಾಗೃಹ, ಬೆಳಗಾವಿ (Belagavi) ಹಿಂಡಲಗಾ ಕೇಂದ್ರ ಕಾರಾಗೃಹ (Hindalaga Jail) ಸ್ಫೋಟಿಸಲಾಗುವುದು. ಅಲ್ಲದೇ ತಾವು ವಾಸಿಸುವ ವಸತಿ ಗೃಹದ ಮೇಲೆ ಬಾಂಬ್ (Bomb) ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ (Threat Call) ಬಂದಿದೆ.
Advertisement
Advertisement
ಹಿಂಡಲಗಾ ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿ ಬೆದರಿಕೆ ಕರೆ ಮಾಡಿ, ಜೈಲಿನಲ್ಲಿ ಗಲಭೆ ಸೃಷ್ಟಿಸಿ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹಿಂಡಲಗಾ ಜೈಲಿನ ಹೆಡ್ ವಾಡರ್‌ಗಳಾದ ಜಗದೀಶ್ ಗಸ್ತಿ, ಎಸ್‌ಎಂ ಗೋಟೆ ಪರಿಚಯಸ್ಥನೆಂದು ಹೇಳಿದ್ದಾನೆ. ಅಲ್ಲದೇ ಫೋನ್ ಕರೆಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಹೆಸರೂ ಉಲ್ಲೇಖ ಮಾಡಿ ತಾನು ಜೈಲಿನಲ್ಲಿದ್ದಾಗ ಬನ್ನಂಜೆ ರಾಜಾಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ
Advertisement
Advertisement
ಈ ಅನಾಮಧೇಯ ವ್ಯಕ್ತಿಯಿಂದ ಕಾರಾಗೃಹ ಆಡಳಿತಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಮಧೇಯ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಬಂಧಿಖಾನೆ ಇಲಾಖೆಯ ಡಿಐಜಿಪಿ ಟಿಪಿ ಶೇಷ ಪ್ರಕರಣ ದಾಖಲಿಸಿದ್ದಾರೆ. ಇದೀಗ ಬಾಂಬ್ ಬೆದರಿಕೆ ಕರೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಮುಂದುವರಿದ ನೀರು ಬಿಡುಗಡೆ; ಈಗ ನೀರು ಎಷ್ಟಿದೆ?
Web Stories