ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಆಡಿಯೋ ವೈರಲ್

Public TV
3 Min Read
MADIKERI BOMB THREATAN

ಮಡಿಕೇರಿ: ಕೊಡಗಿನಲ್ಲಿ (Kodagu) ಹಿಂದಿನಿಂದಲೂ ಒಬ್ಬರಲ್ಲಾ ಒಬ್ಬ ಉಗ್ರರು ಬಂದು ನೆಲೆಕಂಡುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಬ್ದುಲ್ ಮದನಿ ಕೂಡ ಕೊಡಗಿನ ಹೊಸತೋಟಕ್ಕೆ ಬಂದು ತಂಗಿದ್ದು ಹೊಸ ವಿಚಾರವೇನು ಅಲ್ಲ. ಆದರೆ ಈಗ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ (Bomb) ಹಾಕಬೇಕು ಎಂದು ಮಾತನಾಡಿರುವ ಆಡಿಯೋ (Audio) ಮಡಿಕೇರಿ (Madikeri) ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ.

madikeri rat 1

ದೇಶದಲ್ಲಿ ಅಪಾಯಕಾರಿ ಬೆಳವಣಿಗೆಗಳು, ದೇಶ ವಿದ್ರೋಹಿ ಚಟುವಟಿಕೆಗಳು ನಡೆಯಲು ಸಂಚು ರೂಪಿಸಲಾಗುತ್ತಿದೆ ಎಂದು ಪಿಎಫ್‍ಐ (PFI) ಸಂಘಟನೆಯನ್ನು ಇತ್ತೀಚೆಗಷ್ಟೇ ನಿಷೇಧ ಮಾಡಲಾಗಿದೆ. ಆದರೆ ಕಳೆದ ಆರು ತಿಂಗಳ ಹಿಂದೆ ಅಂದರೆ ಏಪ್ರಿಲ್ 25 ರಂದು ಮಡಿಕೇರಿ ನಗರ ಸಭೆ ಸದಸ್ಯ ಜೆಡಿಎಸ್‍ನ ಮುಸ್ತಫಾ ಎಂಬುವರು ಆತನ ಸ್ನೇಹಿತ ಬೆಟ್ಟಗೇರಿಯ ಅಬ್ದುಲ್ಲಾ ಎಂಬುವರೊಂದಿಗೆ ಮಡಿಕೇರಿ ನಗರಕ್ಕೆ ಬಾಂಬ್ ಹಾಕಬೇಕು. ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು. ನಮ್ಮವರು ಒಂದಷ್ಟು ಜನರು ಸತ್ತರೂ ಪರವಾಗಿಲ್ಲ ಎಂದು ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು, ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ. 50ಕ್ಕೂ ಹೆಚ್ಚು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಮಲೆಯಾಳಂ ಭಾಷೆಯಲ್ಲಿ ಮಾತನಾಡಿರುವ ಆಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: RSS ಬಗ್ಗೆ ಹೊಟ್ಟೆ ಕಿಚ್ಚಿದ್ದವರಿಗೆ ಮದ್ದಿಲ್ಲ: ಪ್ರಮೋದ್ ಮಧ್ವರಾಜ್

kodagu madikeri Municipality 1

50 ಜನರ ತಂಡ ಕಟ್ಟಿ ತರಬೇತಿ ಮಾಡಬೇಕು. ಇದಕ್ಕೆ ಎಲ್ಲರೂ 50 ಸಾವಿರ ಒಂದು ಲಕ್ಷ ಹಾಕಬೇಕು. ಅದನ್ನು ಬಳಸಿಕೊಂಡು ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ ಹಾಕಿಬಿಡೋದು. ಆ…. ನನ್ನ ಮಕ್ಕಳಿಗೆ ಬುದ್ದಿ ಕಲಿಸಬೇಕು. ಇಡೀ ಮಡಿಕೇರಿ ಟೌನ್ ಹೊತ್ತಿ ಉರಿಯಬೇಕು. ಮಡಿಕೇರಿ ಮಾತ್ರ ಅಲ್ಲ ಎಲ್ಲಾ ಕಡೆ ಹಾಕಬೇಕು. ಅಲ್ಲ ಅಲ್ಲ.. ಇಡೀ ಮಡಿಕೇರಿ ಹೊತ್ತಿ ಉರಿಯಬೇಕು. ಅವರೂ ಸಾಯಲಿ, ನಾವು ಸಾಯೋಣ. ಒಟ್ನಲ್ಲಿ ಅವರಿಗೆ ಭಯ ಹುಟ್ಟಬೇಕು. 50 ಜಾಗದಲ್ಲಿ ಬಾಂಬ್ ಹಾಕಬೇಕು. ಆಗ ಅವರ ಪಾರ್ಟಿ ಲೈಫ್ ಲಾಂಗ್ ಇರಲ್ಲ. ಬಿಜೆಪಿಯವರು ನಿಲ್ಲೋದಕ್ಕೂ ಹೆದರಬೇಕು. ಈ ಬಾರಿ ರಾಜ್ಯದಲ್ಲಿ ಬಿಜೆಪಿ (BJP) ಸೋಲುತ್ತದೆ. ಆಗ ಇವರಿಗೆ ಗೊತ್ತಾಗುತ್ತದೆ. ಡಿಕೆ ಶಿವಕುಮಾರ್ (D.K Shivakumar)  ಮೈಂಡ್ ಹಿಂದುತ್ವದ್ದು, ಸಿದ್ದರಾಮಯ್ಯ (Siddaramaiah) ಮೈಂಡ್ ಜಾತ್ಯಾತೀತ ಮೈಂಡ್. ಎರಡೂ ಒಂದೇ ಆಗಲು ಸಾಧ್ಯವಿಲ್ಲ ಎಂದು ಪರಸ್ಪರ ಮಾತನಾಡಿರುವ ಆಡಿಯೋ ಫೋನ್‍ನಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಆನ್‌ಲೈನ್ ಶಿಕ್ಷಣವೇ ವಿದ್ಯಾರ್ಥಿಗಳಿಗೆ ಶಿಕ್ಷೆ – ನ್ಯಾ. ಮಲ್ಲಿಕಾರ್ಜುನ ಗೌಡ

IPHONE 2

 

ಮಡಿಕೇರಿ ನಗರದ ನಿವಾಸಿ ಶೇಷಪ್ಪ ರೈ ಎಂಬವರು ಮುಸ್ತಫಾ ಅವರಿಗೆ ಯಾವುದೋ ವ್ಯವಹಾರದ ವಿಷಯ ಮಾತನಾಡುವುದಕ್ಕೆ ಕರೆ ಮಾಡಿದ್ದಾರೆ. ಈ ವೇಳೆ ಮುಸ್ತಫಾ, ಶೇಷಪ್ಪ ರೈ ಅವರ ಫೋನ್ ಕಟ್ ಮಾಡುವ ಬದಲು, ಮಿಸ್ ಆಗಿ ರಿಸೀವ್ ಮಾಡಿ ಫೋನ್ ಅನ್ನು ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಹಾಕುವ ವಿಷಯವನ್ನು ತನ್ನ ಸ್ನೇಹಿತ ಅಬ್ದುಲ್ಲಾ ಎಂಬುವವನೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಈ ಎಲ್ಲಾ ವಿಷಯ ಮುಸ್ತಫಾಗೆ ಕರೆ ಮಾಡಿದ್ದ ಶೇಷಪ್ಪ ರೈ ಅವರ ಫೋನ್‌ನಲ್ಲಿ ಕಾಲ್ ರೆಕಾರ್ಡ್ ಆಗಿದೆ. ಇತ್ತೀಚೆಗೆ ಕಾಲ್ ರೆಕಾರ್ಡ್‍ಗಳನ್ನು ಪರಿಶೀಲನೆ ನಡೆಸುವಾಗ ಇದು ಬೆಳಕಿಗೆ ಬಂದಿದ್ದು ಶೇಷಪ್ಪ ರೈ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶೇಷಪ್ಪ ರೈ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರದ ಪೊಲೀಸರು ಮಡಿಕೇರಿ ನಗರಸಭೆ ಸದಸ್ಯ ಮುಸ್ತಫಾ, ಬೆಟ್ಟಗೇರಿ ಅಬ್ದುಲ್ಲಾ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *