-ಪ್ರಯಾಣಿಕರ ಸುರಕ್ಷತೆಗಾಗಿ ಕಟ್ಟೆಚ್ಚರ
ಕಾರವಾರ: ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ರಾಜ್ಯ ಮೀಸಲು ಬಾಂಬ್ ನಿಷ್ಕ್ರಿಯ ದಳ ಇಂದು ತಪಾಸಣೆ ನಡೆಸಿದರು.
Advertisement
ಮೀಸಲು ಪೊಲೀಸ್ ಪಡೆಯ ಎಎಸ್‍ಐ ಮಾದೇಗೌಡ ನೇತ್ರತ್ವದಲ್ಲಿ ಬಾಂಬ್ ಪತ್ತೆ ಶ್ವಾನವನ್ನು ಬಳಸಿ ರೈಲ್ವೆ ಫ್ಲಾಟ್‍ಫಾರಂ, ರೈಲ್ವೆ ಹಳಿ ಹಾಗೂ ಫ್ಲೈಓವರ್ ತಳಭಾಗದಲ್ಲಿ ಬಾಂಬ್ ಪತ್ತೆ ಕಾರ್ಯ ನಡೆಸಲಾಯಿತು.
Advertisement
ಭಟ್ಕಳ ಸೂಕ್ಷ್ಮ ಪ್ರದೇಶ ಹಿನ್ನಲೆಯಲ್ಲಿ ಹಾಗೂ ಕೇರಳ, ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ ಗೋವಾಕ್ಕೆ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಈ ತಪಾಸಣೆ ಕಾರ್ಯ ನಡೆದಿದ್ದು, ಪ್ರತಿದಿನ ತಪಾಸಣೆಯನ್ನು ರಾಜ್ಯ ಮೀಸಲು ಪೊಲೀಸರು ನಡೆಸಲಿದ್ದಾರೆ.