ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳ ಕಾರ್ಯಾಚರಣೆಯಿಂದಾಗಿ ಬೆಂಗಳೂರು ಸ್ಫೋಟದ ಸಂಚನ್ನು ವಿಫಲಗೊಳಿಸಲಾಗಿದೆ.
ಚಿಕ್ಕಬಾಣಾವರ ರೈಲು ನಿಲ್ದಾಣ ಸಮೀಪದಲ್ಲಿ ವಾಸವಿದ್ದ ಶಂಕಿತ ಹಬೀಬುರ್ ರೆಹಮಾನ್ ಮನೆಯೊಂದರ ಮೇಲೆ ಎನ್‍ಐಎ ದಾಳಿ ನಡೆಸಿದೆ. ಈ ವೇಳೆ 10 ಜೀವಂತ ಬಾಂಬ್ ಮತ್ತು ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ ಪತ್ತೆಯಾಗಿದೆ. ಇವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಇತ್ತೀಚೆಗೆ ಸೆರೆ ಸಿಕ್ಕಿದ್ದ ಶಂಕಿತ ಉಗ್ರ ಹಬೀಬುರ್ ರೆಹಮಾನ್, ಕಳೆದ ಎರಡು ವರ್ಷಗಳಿಂದ ಮುಸ್ತಾನ್ ಎಂಬವರಿಗೆ ಸೇರಿದ ಕಟ್ಟಡವನ್ನ ಬಾಡಿಗೆ ಪಡೆದಿದ್ದನು. ಬಳಿಕ ಮನೆಯನ್ನೇ ಬಾಂಬ್ ಫ್ಯಾಕ್ಟರಿ ಮಾಡಿಕೊಂಡಿದ್ದನು ಎನ್ನಲಾಗಿದೆ.
Advertisement
ಜೊತೆಗೆ ಜೀವಂತ ಬುಲೆಟ್‍ಗಳು, ಗ್ರೆನೇಡ್ ಮಾಡುವುದು ಹೇಗೆ ಮತ್ತು ಬಾಂಬ್ ಬ್ಲಾಸ್ಟ್ ಮಾಡುವುದರ ಬಗ್ಗೆ ಪುಸ್ತಕ ಸಿಕ್ಕಿದೆ. ಸದ್ಯಕ್ಕೆ ಎನ್‍ಐಎ ಅಧಿಕಾರಿಗಳು ದಾಳಿಯಲ್ಲಿ ಸಿಕ್ಕಿ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯಾಚರಣೆಯನ್ನು ಮುಂದುರಿಸಿದ್ದಾರೆ.