ಚಂಡೀಗಢ: ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರ ಮನೆಯ ಸಮೀಪ ಬಾಂಬ್ (Bomb) ಪತ್ತೆಯಾಗಿದೆ. ಮನೆ ಬಳಿಯ ಹೆಲಿಪ್ಯಾಡ್‌ನಲ್ಲಿ ಈ ಬಾಂಬ್ ಕಂಡುಬಂದಿದೆ.
ಈ ಪ್ರದೇಶವು ಹೆಚ್ಚಿನ ಭದ್ರತೆಯನ್ನು ಹೊಂದಿದೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ನಿವಾಸವೂ ಇದಕ್ಕೆ ಹತ್ತಿರದಲ್ಲಿದೆ. ಇದನ್ನೂ ಓದಿ: ನೋಟು ನಿಷೇಧದ ಅಧಿಸೂಚನೆಯೇ ಕಾನೂನುಬಾಹಿರ: ನ್ಯಾ.ನಾಗರತ್ನ
ಪಂಜಾಬ್ ಮತ್ತು ಹರಿಯಾಣ ಸೆಕ್ರೆಟರಿಯೇಟ್ ಮತ್ತು ಅಸೆಂಬ್ಲಿ ಕೂಡ ಬಾಂಬ್ ಪತ್ತೆಯಾದ ಸ್ಥಳಕ್ಕೆ ಸಮೀಪದಲ್ಲಿದೆ.
ಪಂಜಾಬ್ ಹಾಗೂ ಹರಿಯಾಣ ಸಿಎಂ ಹೌಸ್‌ನ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಯಿತು. ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಕೂಡ ತನಿಖೆಗಾಗಿ ಸ್ಥಳಕ್ಕೆ ಬಂದಿದೆ. ಇದನ್ನೂ ಓದಿ: ತುನಿಷಾಳನ್ನು ಆಕೆ ತಾಯಿ ಸರಿಯಾಗಿ ನೋಡಿಕೊಳ್ತಿರಲಿಲ್ಲ; ಅಣ್ಣನ ವಿರುದ್ಧದ ಆರೋಪಗಳು ಸುಳ್ಳು – ಶೀಜಾನ್ ಖಾನ್ ಸಹೋದರಿ