ಚಂಡೀಗಢ: ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಕೆಳಗೆ ಬಾಂಬ್ ಮಾದರಿಯ ವಸ್ತುವೊಂದು ಪತ್ತೆ ಆದ ಘಟನೆ ಪಂಜಾಬ್‍ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.
ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್ ಇನ್ಸ್‌ಪೆಕ್ಟರ್ ದಿಲ್ಬಾಗ್ ಸಿಂಗ್ ಅವರ ನಿವಾಸದ ಬಳಿ ಬಾಂಬ್ ಮಾದರಿಯ ವಸ್ತು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ ಪೊಲೀಸರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್‍ನಲ್ಲಿ ಬಂದು ಪೊಲೀಸ್ ಕಾರಿನ ಕೆಳಗೆ ಈ ಅನುಮಾನಸ್ಪದ ವಸ್ತುವನ್ನು ಇಟ್ಟು ಹೋಗಿರುವುದು ಕಂಡು ಬಂದಿದೆ.
Advertisement
Advertisement
ಪ್ರಾಥಮಿಕ ಮಾಹಿತಿಯ ಪ್ರಕಾರ ಈ ವಸ್ತು ಬಾಂಬ್ ಎಂದು ತಿಳಿಸಿದ್ದಾರೆ. ಇನ್ಸ್‌ಪೆಕ್ಟರ್ ಜನರಲ್ ಸುಖ್ ಚಾನ್ ಸಿಂಗ್ ಗೋಲ್ ಅವರು, ಈ ವಸ್ತುವು ಡಿಟೋನೇಟರ್ ಆಗಿರಬಹುದು ಎಂದು ಹೇಳಿದ್ದಾರೆ. ಪೊಲೀಸರು ವಾಹನವನ್ನು ಪ್ರದೇಶದಿಂದ ಸ್ಥಳಾಂತರಿಸಿದ್ದಾರೆ. ಘಟನೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೇನೆಗೆ ಸ್ವದೇಶಿ ಆಧುನಿಕ ಶಸ್ತ್ರಾಸ್ತ್ರ ಹಸ್ತಾಂತರ – ಏನಿದು F-INSAS ಸಿಸ್ಟಂ? ನಿಪುಣ್ ಲ್ಯಾಂಡ್ ಮೈನ್ಸ್?
Advertisement
Punjab | Bomb was placed under my car. My car cleaner informed me about it. CCTV footage shows two men putting something under my car at around 2 am. I’ve worked during militancy & that’s why they kept it.FIR has been registered in the matter: Sub-inspector Dilbag Singh, Amritsar pic.twitter.com/9n7mhelK2N
— ANI (@ANI) August 16, 2022
Advertisement
ಈ ಬಗ್ಗೆ ಸಬ್ ಇನ್ಸ್‌ಪೆಕ್ಟರ್ ದಿಲ್ಬಾಗ್ ಸಿಂಗ್ ಮಾತನಾಡಿ, ನನ್ನ ಕಾರಿನ ಕೆಳಗೆ ಬಾಂಬ್ ಇಡಲಾಗಿತ್ತು. ನನ್ನ ಕಾರ್ ಕ್ಲೀನರ್ ಅದರ ಬಗ್ಗೆ ನನಗೆ ಮಾಹಿತಿ ನೀಡಿದರು. ನಸುಕಿನ 2 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ನನ್ನ ಕಾರಿನ ಕೆಳಗೆ ಏನನ್ನೋ ಹಾಕಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಈ ವಿಷಯದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಐಜಿ ಬಾರ್ಡರ್ ರೇಂಜ್ ಮನೀಶ್ ಚಾವ್ಲಾ ಮಾತನಾಡಿ, ಸಬ್ ಇನ್ಸ್‌ಪೆಕ್ಟರ್ ಕಾರಿನಲ್ಲಿ ಯಾರೋ ಐಇಡಿ ಇಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಪೊಲೀಸರು ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ. ಐಇಡಿಯ ವಿಧಿವಿಜ್ಞಾನ ತನಿಖೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ