ಹಾವೇರಿ: ಎಮ್ಮೆ ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಎಮ್ಮೆ (Buffalo) ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಬಳಿ ನಡೆದಿದೆ.
ಗ್ರಾಮದ ರೈತ ಬಾಷಾಸಾಬ್ ಬಂಕಾಪುರ ಎಂಬ ರೈತನಿಗೆ ಸೇರಿದ ಎಮ್ಮೆ ಮೃತಪಟ್ಟಿದೆ. ಕಾಡು ಹಂದಿ ಬೇಟೆಗಾಗಿ ಬೇಟೆಗಾರರು ಇಟ್ಟಿದ್ದ ಕಚ್ಚಾ ನಾಡಬಾಂಬ್ ಸೇವಿಸಿ ಈ ದುರ್ಘಟನೆ ನಡೆದಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ದನಗಳು ಮೇಯಿಸಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: ಛತ್ತೀಸ್‌ಗಢ| ಇಬ್ಬರು ನಾಗರಿಕರ ಹತ್ಯೆ ಮಾಡಿದ ನಕ್ಸಲರು
Advertisement
Advertisement
ಕಚ್ಚಾ ನಾಡಬಾಂಬ್ ಇಟ್ಟವರ ಮೇಲೆ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ. ಎಮ್ಮೆ ಕಳೆದುಕೊಂಡ ಬಡ ರೈತನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲಾಗಿದೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಉತ್ತರಾಖಂಡದ ಬಳಿಕ ಗುಜರಾತ್‌ನಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ
Advertisement