ಬೆಂಗಳೂರು: ವಿಧಾನಸೌಧಕ್ಕೆ (Vidhana Soudha) ಬಾಂಬ್ ಬೆದರಿಕೆ ಹಾಕಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ (Software Engineer) ಒಬ್ಬನನ್ನು ಪೊಲೀಸರು (Bengauru Police) ಬಂಧಿಸಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಧಿತ ಆರೋಪಿ. ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಕರೆ ಮಾಡಿ, ವಿಧಾನಸೌಧದ ಎರಡು ಕಡೆ ಬಾಂಬ್ ಇರಿಸಲಾಗಿದೆ. ಸದ್ಯದಲ್ಲೇ ಸ್ಫೋಟಗೊಳ್ಳಲಿದೆ (Bomb Blast)ಎಂದು ಹೇಳಿದ್ದ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್: ಪತಿ ಜೊತೆ ದಿವ್ಯಾ ಶ್ರೀಧರ್ ಡಿಶುಂ ಡಿಶುಂ ವಿಡಿಯೋ
Advertisement
Advertisement
ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಂದ (Police) ಪರಿಶೀಲನೆ ನಡೆಸಲಾಯಿತು. ಬಳಿಕ ಇದೊಂದು ಹುಸಿ ಕರೆ ಎಂದು ತಿಳಿದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಕಾರ್ಯಾಚಾರಣೆ ನಡೆಸಿ ತಡರಾತ್ರಿ ಪರಪ್ಪನ ಅಗ್ರಹಾರದ ಬಳಿ ಆರೋಪಿಯನ್ನು ಬಂಧಿಸಲಾಯಿತು ಎಂದು ಕೇಂದ್ರ ವಿಭಾಗದ ಡಿಸಿಪಿ (DCP) ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್
Advertisement
Advertisement
ನಿನ್ನೆ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ 3 ಬಾರಿ ಕರೆ ಮಾಡಿದ್ದ ಪ್ರಶಾಂತ್ ಇಬ್ಬರ ಜೊತೆಗೆ ಲಿವಿಂಗ್ ಟುಗೇದರ್‌ನಲ್ಲಿದ್ದಾರೆ ಎಂಬ ಮಾಹಿತಿ ಇದೆ. ಆ ವಿಚಾರದಲ್ಲಿ ಖಿನ್ನತೆಗೆ ಒಳಾಗಿದ್ದ. ಅಪರಿಚಿತರಿಂದ ನಂಗೆ ತೊಂದರೆ ಆಗ್ತಿದೆ, ಅಂತಾ ಎಲ್ಲರ ಬಳಿ ಹೇಳ್ಕೋತಿದ್ದ. ಆದ್ರೆ ಯಾರೂ ಪ್ರಶಾಂತ್ ನನ್ನು ಸಿರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಯಾರೂ ನನ್ನ ಮಾತು ಕೇಳ್ತಿಲ್ಲ ಅಂತಾ ಕೋಪಗೊಂಡು ಕೃತ್ಯವೆಸಗಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ.