ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಶಪಜೀಜಾ ಕ್ರಿಕೆಟ್ ಲೀಗ್ ಟಿ20 ಪಂದ್ಯದ ವೇಳೆ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ.
ಬ್ಯಾಂಡ್-ಎ-ಅಮೀರ್ ಡ್ರ‍್ಯಾಗನ್ ಹಾಗೂ ಪಮೀರ್ ಝಲ್ಮಿ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆಯೇ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸದ್ಯ ಎಲ್ಲಾ ಆಟಗಾರರೂ ಸುರಕ್ಷಿತರಾಗಿದ್ದು, ಅವರನ್ನು ರಕ್ಷಣೆಗೆ ಬಂಕರ್‌ಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು
Advertisement
Footage : There have been casualties in the blast at the Kabul international cricket stadium. #Afghanistan pic.twitter.com/wM7qMsVDpR
— Abdulhaq Omeri (@AbdulhaqOmeri) July 29, 2022
Advertisement
ಸ್ಫೋಟ ಸಂಭವಿಸುತ್ತಲೇ ಕ್ರೀಡಾಂಗಣದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಜನರು ಪ್ರಾಣಾಪಾಯದಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ಗುಂಪಾಗಿ ಧಾವಿಸಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ
Advertisement
2 ದಿನಗಳ ಹಿಂದೆಯಷ್ಟೇ ಕಾಬೂಲ್ ಗುರುದ್ವಾರ ಕಾರ್ಟೆ ಪರ್ವಾನ್ ಗೇಟ್ ಬಳಿ ಸ್ಫೋಟ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ ಕ್ರೀಡಾಂಗಣದಲ್ಲಿ ಸ್ಫೋಟ ಸಂಭವಿಸಿದೆ. ಸಾರ್ವಕನಿಕರು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ಆಗಾಗ ಮರುಕಳಿಸುತ್ತಿರುವುದು ಆಫ್ಘನ್ನರಲ್ಲಿ ನಡುಕ ಉಂಟು ಮಾಡುತ್ತಿದೆ.