ಸನ್ನಿ ಡಿಯೋಲ್ (Sunny Deol) ನಟನೆಯ ಗದರ್ 2 ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಗೆಲುವನ್ನು ಸಹಿಸಿಕೊಳ್ಳಲು ಆಗದೇ ಇರುವ ಕಿಡಿಗೇಡಿಗಳು ಚಿತ್ರ ಪ್ರದರ್ಶನ ಕಾಣುತ್ತಿದ್ದ ಥಿಯೇಟರ್ ಮುಂದೆ ಬಾಂಬ್ (Bomb) ಸ್ಪೋಟಿಸಿ ಆತಂಕ ಸೃಷ್ಟಿಸಿದ್ದಾರೆ. ಈ ದುಷ್ಕೃತ್ಯ ಪಾಟ್ನದಲ್ಲಿ ನಡೆದಿದೆ.
ಗದರ್ 2 (Gadar 2) ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ 250 ಕೋಟಿ ರೂಪಾಯಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಇದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದು ಥಿಯೇಟರ್ ಮಾಲೀಕರ ಆರೋಪ. ಹಾಗಾಗಿಯೇ ಪ್ರೇಕ್ಷಕರನ್ನು ಮತ್ತು ಥಿಯೇಟರ್ ಸಿಬ್ಬಂದಿಯನ್ನು ಹೆದರಿಸುವಂತಹ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.
ಕೆಲವರು ಬ್ಲಾಕ್ ಟಿಕೆಟ್ ಮಾರಲು ಯತ್ನಿಸಿದರೆ, ಇನ್ನೂ ಕೆಲವರು ಬಾಂಬ್ ಸ್ಪೋಟಿಸಿ ಆತಂಕ ಸೃಷ್ಟಿ ಮಾಡುತ್ತಾರೆ. ಈಗ ಸ್ಫೋಟಗೊಂಡಿರುವ ಬಾಂಬ್ ತೀವ್ರ ಸ್ವರೂಪದ್ದು ಆಗಿರಲಿಲ್ಲ. ಹಾಗಾಗಿ ಯಾವುದೇ ಜೀವಹಾನಿ ಆಗಿಲ್ಲ. ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಇದೆ.
Web Stories