ಮುಂಬೈ: ಬಾಲಿವುಡ್ ತಾರೆಯರು ಇತ್ತೀಚೆಗೆ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಅಕ್ಷಯ್ ಕುಮಾರ್ ಹಾಗೂ ದೀಪಿಕಾ ಪಡುಕೋಣೆ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ.
ಸಾಮಾನ್ಯವಾಗಿ ದೀಪಿಕಾ ಪಡುಕೋಣೆ ಒಂದು ಚಿತ್ರಕ್ಕಾಗಿ 8 ರಿಂದ 10 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ. ಆದರೆ ಪದ್ಮಾವತ್ ಚಿತ್ರಕ್ಕಾಗಿ ದೀಪಿಕಾ 12 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದರು. ಈ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಇಬ್ಬರಿಗಿಂತಲೂ ದೀಪಿಕಾ ಹೆಚ್ಚು ಸಂಭಾವನೆ ಪಡೆದಿದ್ದರು.
Advertisement
ಇನ್ನೂ ಬಾಲಿವುಡ್ ನಾಯಕಿಯರಾದ ಪ್ರಿಯಾಂಕಾ ಚೋಪ್ರಾ ಹಾಗೂ ಅನುಷ್ಕಾ ಶರ್ಮಾ 6.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಕಂಗನಾ ರಣೌತ್ ಹಾಗೂ ಕರೀನಾ ಕಪೂರ್ ತಲಾ 6 ಕೋಟಿ ರೂ., ಸೋನಂ ಕಪೂರ್ ಹಾಗೂ ಅಲಿಯಾ ಭಟ್ 5 ಕೋಟಿ ರೂ. ಪಡೆದರೆ, ಕತ್ರಿನಾ ಕೈಫ್ 4.5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ.
Advertisement
Advertisement
ಪರಿಣೀತಿ ಚೋಪ್ರಾ ಹಾಗೂ ಸೋನಾಕ್ಷಿ ಸಿನ್ಹಾ ಒಂದು ಚಿತ್ರಕ್ಕೆ 1 ರಿಂದ 2 ಕೋಟಿ ರೂ. ಪಡೆದರೆ, ಜಾಕ್ವಲೀನ್ ಫರ್ನಾಂಡಿಸ್ ಹಾಗೂ ಶ್ರದ್ಧಾ ಕಪೂರ್ ಒಂದು ಚಿತ್ರಕ್ಕೆ 1.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಭೂಮಿ ಪಾಡ್ನೇಕೇರ್, ತಾಪ್ಸಿ ಪನ್ನು ಹಾಗೂ ಕೃತಿ ಸನೂನ್ ಒಂದು ಚಿತ್ರಕ್ಕೆ 50 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ.
Advertisement
ಭಾಯ್‍ಜಾನ್ ಸಲ್ಮಾನ್ ಖಾನ್ ಹಾಗೂ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಒಂದು ಚಿತ್ರಕ್ಕೆ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಒಂದು ಚಿತ್ರಕ್ಕೆ 40 ರಿಂದ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಇನ್ನು ಶಾರೂಕ್ ಖಾನ್ ಹಾಗೂ ಹೃತಿಕ್ ರೋಶನ್ ಚಿತ್ರ ಒಂದಕ್ಕೆ 40 ರಿಂದ 45 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಅಜಯ್ ದೇವಗನ್ ಒಂದು ಚಿತ್ರಕ್ಕೆ 35 ಕೋಟಿ ರೂ. ಸಂಭಾವನೆ ಪಡೆದರೆ, ರಣ್‍ವೀರ್ ಸಿಂಗ್ ಹಾಗೂ ರಣ್‍ಬೀರ್ ಕಪೂರ್ ಒಂದು ಚಿತ್ರಕ್ಕೆ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನೂ ಹಿರಿಯ ನಟ ಅಮಿತಾಬ್ ಬಚ್ಚನ್ 18 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ‘ಪೀಕು’ ಚಿತ್ರಕ್ಕೆ ಅವರು 8 ಕೋಟಿ ರೂ. ಸಂಭಾವನೆ ಪಡೆದಿದ್ದು, ಇದೇ ಚಿತ್ರದಲ್ಲಿ ನಟಿಸಿದ ದೀಪಿಕಾ ಪಡುಕೋಣೆ 10 ಕೋಟಿ ರೂ. ಸಂಭಾವನೆ ಪಡೆದಿದ್ದರು.
ಶಾಹಿದ್ ಕಪೂರ್ ಒಂದು ಚಿತ್ರಕ್ಕೆ 10 ರಿಂದ 15 ಕೋಟಿ ರೂ. ಸಂಭಾವನೆ ಪಡೆದರೆ, ಟೈಗರ್ ಶ್ರಾಫ್ 5 ರಿಂದ 6 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನೂ ಬಾಹುಬಲಿ ಪ್ರಭಾಸ್ ಬಾಹುಬಲಿ-2 ಚಿತ್ರಕ್ಕೆ 25 ಕೋಟಿ ರೂ. ಸಂಭಾವನೆ ಪಡೆದಿದ್ದರು. ಬಾಹುಬಲಿ-2 ಚಿತ್ರದ ಬಿಡುಗಡೆ ಆದ ನಂತರ ಪ್ರಭಾಸ್ ತಮ್ಮ ಸಂಭಾವನೆಯನ್ನು 30 ಕೋಟಿ ರೂ. ಹೆಚ್ಚಿಸಿಕೊಂಡಿದ್ದಾರೆ.