ಬೆಂಗಳೂರು: ಧ್ರುವ ಸರ್ಜಾ ಅವರ ಭರ್ಜರಿ ಸಿನಿಮಾ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಂಡಿದೆ. ಹೀಗಿರುವಾಗ ಬಾಲಿವುಡ್ ಸ್ಟಾರ್ ಚಿತ್ರ ಕಥೆಗಾರ್ತಿ ಶಗುಫ್ತಾ ರಫೀಕ್ ಅವರು ಧ್ರುವ ಸರ್ಜಾಗಾಗಿ ಒಂದು ಒಳ್ಳೆಯ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.
ಧ್ರುವ ಸಿನಿಮಾಕ್ಕಾಗಿ ಶಗುಫ್ತಾ ಅವರನ್ನು ಕರೆ ತರಲು ಚಿತ್ರತಂಡ ಯೋಚಿಸಿದ್ದು, ಜಗ್ಗುದಾದ ಖ್ಯಾತಿಯಾ ನಿರ್ದೇಶಕ ರಾಘವೇಂದ್ರ ಹೆಗ್ಡೆ ನಿರ್ದೇಶನ ಮಾಡಲಿದ್ದಾರೆ. ಶಗುಪ್ತಾ ಅವರು ಹಮಾರಿ ಅದೂರಿ ಕಹಾನಿ, ಜಿಸ್ಮ್-2, ಮರ್ಡರ್-2, ಆಶಿಕಿ-2 ರಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕಥೆ ಬರೆದಿದ್ದು, ಈಗ ಕನ್ನಡ ಚಿತ್ರಕ್ಕಾಗಿ ಕಥೆ ಬರೆಯಲಿದ್ದಾರಂತೆ.
Advertisement
ಚಿತ್ರತಂಡ ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈಗ ಧ್ರುವ ಅವರು ಪೊಗರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.