Bengaluru CityBollywoodCinemaKarnatakaLatestMain PostSandalwood

ಘುಸ್ ಕೆ ಮಾರೆಂಗೆ ಎಂದ `ಕೆಜಿಎಫ್ 2′ ನಟಿಗೆ ಫ್ಯಾನ್ಸ್ ಮಾಡಿದ್ದೇನು ಗೊತ್ತಾ?

ಚಿತ್ರರಂಗದಲ್ಲಿ ಸದ್ಯ ಸೌಂಡ್ ಮಾಡ್ತಿರೋ ಚಿತ್ರ ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ. ದೇಶದ ಮೂಲೆ ಮೂಲೆಯಲ್ಲೂ ಈ ಸಿನಿಮಾ ನೋಡಿ ಅಭಿಮಾನಿಗಳು ಬಹುಪರಾಕ್ ಅಂತಿದ್ದಾರೆ. ಸದ್ಯ ಈ ಚಿತ್ರದ ಪ್ರಮುಖ ಪಾತ್ರಧಾರಿ ರವೀನಾ ಟಂಡನ್ ನಟಿಸಿರುವ ರಮೀಕಾ ಸೇನ್ ಪಾತ್ರಕ್ಕೆ ಥಿಯೇಟರ್‌ನಲ್ಲಿ ಅಭಿಮಾನಿಗಳು ನಾಣ್ಯಗಳನ್ನ ಎಸೆಯುತ್ತಿರುವ ಕ್ಲಿಪ್‌ನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

`ಕೆಜಿಎಫ್ 2’ನಲ್ಲಿ ಖಡಕ್ ನಟನೆಯ ಮೂಲಕ ಮೋಡಿ ಮಾಡಿರೋ ನಟಿ ರವೀನಾ ಟಂಡನ್, ರಮೀಕಾ ಸೇನ್ ಪಾತ್ರಕ್ಕೆ ಜೀವತುಂಬಿದ್ರು. ಇದೀಗ ಈ ಪಾತ್ರ ಕೂಡ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ. `ಘುಸ್ ಕೆ ಮಾರೆಂಗ್’ ಅನ್ನೋ ಖಡಕ್ ಡೈಲಾಗ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಥಿಯೇಟರ್ ರವೀನಾ ನಟನೆಗೆ ನಾಣ್ಯಗಳನ್ನು ಎಸೆದು ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

`ಕೆಜಿಎಫ್ ೨’ ಚಿತ್ರದಲ್ಲಿ ರಮೀಕಾ ಸೇನ್ ಪಾತ್ರದ ಕ್ಲಿಪಿಂಗ್ ಜತೆಗೆ ಸೆಟ್‌ನಲ್ಲಿ ಪ್ರಶಾಂತ್‌ನೀಲ್ ಜತೆಯೋ ಚಿತ್ರೀಕರಣದ ಕ್ಲಿಪಿಂಗ್ ಸೇರಿಸಿ, ಬಹಳ ಸಮದ ನಂತರ ಪರದೆಯ ಮೇಲೆ ನಾಣ್ಯಗಳನ್ನ ಹಾರುವುದನ್ನ ನೋಡಿದೆ ಎಂದು ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದನ್ನೂ ಓದಿ:ಮದುವೆಯ ಬಳಿಕ ಮತ್ತೆ ಶೂಟಿಂಗ್‌ನತ್ತ ಮುಖ ಮಾಡಿದ ಆಲಿಯಾ ಭಟ್!

ರಾಕಿಭಾಯ್ ಸಿನಿಮಾ ನೋಡಿ ಎಂಜಾಯ್ ಮಾಡ್ತಿರೋ ಫ್ಯಾನ್ಸ್, ರವೀನಾ ಟಂಡನ್ ನಟನೆಗೂ ಫಿದಾ ಆಗಿದ್ದಾರೆ. `ಕೆಜಿಎಫ್ 2′ ಭರ್ಜರಿ ಸಕ್ಸಸ್ ನಂತರ ಅಭಿಮಾನಿಗಳು `ಕೆಜಿಎಫ್ 3′ ನಿರೀಕ್ಷೆಯಲ್ಲಿದ್ದಾರೆ.

Leave a Reply

Your email address will not be published.

Back to top button