‘ಪಠಾಣ್’ (Pathaan) ಸೂಪರ್ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ‘ಫೈಟರ್’ (Fighter) ಸಿನಿಮಾದಲ್ಲಿ ಹೃತಿಕ್ ಜೊತೆ ತೆರೆಹಂಚಿಕೊಳ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮಿರುತ್ತಿದೆ ಎಂದು ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
Advertisement
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಪಠಾಣ್’ಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದಾರೆ. ಹೃತಿಕ್-ದೀಪಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸ್ಟಾರ್ ಕಲಾವಿದರ ದುಬಾರಿ ಸಂಭಾವನೆ ವಿಷ್ಯವಾಗಿ ಫೈಟರ್ ಸುದ್ದಿಯಲ್ಲಿದೆ. ಇದನ್ನೂ ಓದಿ:ಬಜರಂಗದಳ ನಿಷೇಧ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ
Advertisement
Advertisement
ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ತಲುಪಿದೆ. ಇದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಈ ಚಿತ್ರದ ಬಜೆಜ್ ಕೈ ಮೀರಿ ಹೋಗಿದೆ ಎಂದಿದ್ದಾರೆ. ಈ ಸಂಭಾವನೆ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.
Advertisement
Hrithik‘s film #fighter has gone over budget and touching Rs.350Cr, which will be impossible to recover. Director Siddharth Anand charged ₹40Cr. Hrithik fees is ₹85Cr and Deepika’s fees is Rs.20Cr. Other star cast ₹15Cr. Total ₹160Cr! Jai Ho.
— KRK (@kamaalrkhan) May 3, 2023
ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ ಕೋಟಿ ಕೋಟಿ ಲೂಟಿ ಮಾಡಿರೋದ್ರಿಂದ ಸಹಜವಾಗಿ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಕಲಾವಿದರ ಸಂಭಾವನೆ ಮೀರಿ ಕಲೆಕ್ಷನ್ ಮಾಡುವ ‘ಫೈಟರ್’ ದಾಖಲೆ ಬರೆಯುತ್ತಾ ಎಂದು ಕಾದುನೋಡಬೇಕಿದೆ.