ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಉತ್ತರ ಪ್ರದೇಶದ 1,398 ರೈತರ 3.99 ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಿದ್ದಾರೆ.
76 ವರ್ಷದ ಅಮಿತಾಭ್ ಈ ಕುರಿತು ತಮ್ಮ ಬ್ಲಾಗ್‍ನಲ್ಲಿ ಮಾಹಿತಿ ನೀಡಿದ್ದು, ಆಯ್ದ 70 ರೈತರಿಗೆ ವೈಯಕ್ತಿಕವಾಗಿ ಬ್ಯಾಂಕ್ ಸಾಲಮರುಪಾವತಿ ಮಾಡಿರುವ ಪತ್ರಗಳನ್ನು ಹಸ್ತಾಂತರಿಸಲು ಮುಂಬೈಗೆ ಬರಲು ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿ ಸಿಲುಕಿದ್ದ ಹಲವು ರೈತರಿಗೆ ಸಹಾಯ ನೀಡಿದ್ದು, ಜನ್ಮ ನೀಡಿದ ನೆಲದ ಋಣ ತೀರಿಸಲು ಮುಂದಾಗಿದ್ದಾರೆ.
Advertisement
Advertisement
ಇದೇ ಮೊದಲಲ್ಲ: ಅಮಿತಾಭ್ ಬಚ್ಚನ್ ರೈತರ ಸಾಲ ಮರು ಪಾವತಿ ಮಾಡಿ ಅವರ ನೆರವಿಗೆ ಧಾವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ 350 ರೈತರ ಸಾಲವನ್ನು ಪಾವತಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮಿತಾಬ್ ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದಾರೆ.
Advertisement
ಇತ್ತ ಒನ್ ಟೈಮ್ ಪೇಮೆಂಟ್ ನೀಡಲು ಸಹಕಾರ ನೀಡಿದ ಬ್ಯಾಂಕ್‍ಗಳಿಗೂ ಅಮಿತಾಭ್ ಕೃತಜ್ಞತೆ ತಿಳಿಸಿದ್ದಾರೆ. ದೇಶದ ಶೇ.50 ರಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದು ದೇಶದ ಜಿಡಿಪಿಗೆ ಶೇ.18 ರಷ್ಟು ಕೊಡುಗೆ ನೀಡುತ್ತಿದ್ದಾರೆ. ಆದರೆ ಅವೈಜ್ಞಾನಿಕ ಬೆಲೆ, ಮಳೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿದ್ದಾರೆ.
Advertisement
ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಅನ್ವಯ 2011 ರಲ್ಲಿ 14,027, 2012 ರಲ್ಲಿ 13,754 2014ರಲ್ಲಿ 12,360, 2015ರಲ್ಲಿ 12,602 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv