ಬಾಲಿವುಡ್‌ನಲ್ಲಿ ಐಶ್ವರ್ಯಾ ರೈ ಸಂಸಾರದ ಬಗ್ಗೆ ನಾನಾ ವದಂತಿಗಳು ಹಬ್ಬಿದೆ. ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ಐಶ್ವರ್ಯಾ ರೈ (Aishwarya Rai) ದಾಂಪತ್ಯ ಸರಿಯಿಲ್ಲ ಎನ್ನಲಾದ ಸುದ್ದಿಯೊಂದು ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇದೀಗ ಪತ್ನಿ ಐಶ್ವರ್ಯಾ ಮತ್ತು ಪುತ್ರಿ ಜೊತೆ ಅಭಿಷೇಕ್ ದುಬೈನಲ್ಲಿ ವೆಕೇಷನ್‌ನಲ್ಲಿರುವ ವಿಡಿಯೋ ವೈರಲ್ ಆಗುವ ಮೂಲಕ ಡಿವೋರ್ಸ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಪ್ರತಿ ಬಾರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕಾಗಿದೆ ಎಂಬ ಸುದ್ದಿ ಗಾಸಿಪ್ ಮಂದಿಯ ಬಾಯಿಗೆ ಆಹಾರವಾಗುತ್ತಲೇ ಇರುತ್ತದೆ. ಆದರೆ ಇದುವರೆಗೂ ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡುವ ಕೆಲಸ ಮಾಡಿರಲಿಲ್ಲ. ಇದೀಗ ದುಬೈನಲ್ಲಿ ಮಗಳು ಮತ್ತು ಪತ್ನಿಯೊಡನೆ ಅಭಿಷೇಕ್ ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೂವರು ಜೊತೆಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
View this post on Instagram
ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಈ ಮದುವೆಯ ನಂತರ ಮಗಳು ಆರಾಧ್ಯಾ ಜೊತೆ ನ್ಯೂಯಾರ್ಕ್ ವೆಕೇಷನ್‌ಗೆ ನಟಿ ತೆರಳಿದ್ದರು. ಆಗ ಅಭಿಷೇಕ್ ಇವರ ಜೊತೆ ಇಲ್ಲದೇ ಇರೋದು ಡಿವೋರ್ಸ್ ವದಂತಿಗೆ ಪುಷ್ಠಿ ನೀಡಿತ್ತು.
ಇನ್ನೂ ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾದ ಸಕ್ಸಸ್ ಬಳಿಕ ಮತ್ತೆ ವೈಯಕ್ತಿಕ ಬದುಕಿನಲ್ಲಿ ಐಶ್ವರ್ಯಾ ಬ್ಯುಸಿಯಾಗಿದ್ದಾರೆ. ಉತ್ತಮ ಕಥೆ ಸಿಕ್ಕರೆ ನಟಿಸೋದಾಗಿ ತಿಳಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರು ‘ಕಿಂಗ್’ (King) ಸಿನಿಮಾದಲ್ಲಿ ಶಾರುಖ್‌ಗೆ ವಿಲನ್ ಆಗಿ ಅಬ್ಬರಿಸಲಿದ್ದಾರೆ.