ಮುಂಬೈ: ಭಾರತೀಯ ಚಲನಚಿತ್ರವು ಶ್ರೇಷ್ಠ ಬಾಲಿವುಡ್ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ಒಂದು ದಿನದ ನಂತರದಲ್ಲೇ ಹಿರಿಯ ನಟ ರಿಷಿ ಕಪೂರ್ ಅವರು 67ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದು ಬಾಲಿವುಡ್‍ಗೆ ಮತ್ತೊಂದು ಆಘಾತದ ಸಂಗತಿಯಾಗಿದೆ.
ರಿಷಿ ಕಪೂರ್ ಅವರ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.
Advertisement
#RishiKapoor childhood hero…gone..heartfelt condolences to his family and friends.
— Anil Kumble (@anilkumble1074) April 30, 2020
Advertisement
ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, ರಿಷಿ ಕಪೂರ್ ಅವರು ನನ್ನ ಬಾಲ್ಯದ ಹೀರೋ. ಅವರು ಇಂದು ನಮ್ಮನ್ನು ಅಗಲಿದ್ದಾರೆ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
Advertisement
ಸೆಹ್ವಾಗ್ ಟ್ವೀಟ್ ಮಾಡಿ, ರಿಷಿ ಕಪೂರ್ ಜಿ ಅವರ ನಿಧನದ ಸುದದಿ ಆಘಾತವನ್ನು ಉಂಟು ಮಾಡಿದೆ. ಅಗಲಿ ನೋವನ್ನು ಹಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ. ಓಂ ಶಾಂತಿ ಎಂದು ತಿಳಿಸಿದ್ದಾರೆ.
Advertisement
Extremely sad to hear about the demise of #RishiKapoor ji. My heartfelt condolences to his family and loved ones pic.twitter.com/PJUfmCx9hk
— VVS Laxman (@VVSLaxman281) April 30, 2020
ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿದ್ದ ರಿಷಿ ಕಪೂರ್ ಅನಾರೋಗ್ಯದ ಕಾರಣ ಏಪ್ರಿಲ್ 2ರಿಂದ ಏನನ್ನೂ ಪೋಸ್ಟ್ ಮಾಡಿಲ್ಲ. ಇತ್ತೀಚೆಗಷ್ಟೇ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ತಿಳಿಸಿದ್ದರು ರಿಷಿ ಕಪೂರ್. ದೀಪಿಕಾ ಪಡುಕೋಣೆ ಜೊತೆಗೆ ಹಾಲಿವುದ್ ಸಿನಿಮಾ ‘ದಿ ಇಂಟರ್ನ್’ ನಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್ಸಾಗಿದ್ದರು. ಆ ನಂತರ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
Woke up with this very sad news @chintskap is no more #RIPRishikapoor ji ???? Condolence to the family..
— Harbhajan Turbanator (@harbhajan_singh) April 30, 2020