ಬಾಲಿವುಡ್‌ನ ಸಂಗೀತ ನಿರ್ದೇಶಕ ಕಮ್ ಗಾಯಕ ಅಜಯ್ ಗೋಗವಾಲೆ (Ajay Gogavale) ಅವರು ಸ್ಯಾಂಡಲ್‌ವುಡ್‌ಗೆ (Sabdalwood)ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಅವರು ಹಾಡಿದ್ದಾರೆ. ಇದನ್ನೂ ಓದಿ:ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು
‘ದೂರದರ್ಶನ’ ಚಿತ್ರ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ ನಿರ್ದೇಶನದ ‘ಪೀಟರ್’ ಚಿತ್ರಕ್ಕೆ (Peter Film) ಬಾಲಿವುಡ್ ಗಾಯಕ ಅಜಯ್ ಗೋಗವಾಲೆ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಟುಡಿಯೋಗೆ ಆಗಮಿಸಿ ತಮ್ಮ ಹಾಡಿನ ಭಾಗ ಪೂರ್ಣಗೊಳಿಸಿ ತೆರಳಿದ್ದಾರೆ. ಇದನ್ನೂ ಓದಿ:ಪ್ರತಿ ಜನ್ಮಕೂ ನೀನೇ ಬೇಕು – ಚಿರು ಜೊತೆಗಿನ ಸ್ಪೆಷಲ್ ಫೋಟೋ ಹಂಚಿಕೊಂಡ ಮೇಘನಾ
View this post on Instagram
ಅಂದಹಾಗೆ, ಈ ಚಿತ್ರದಲ್ಲಿ ‘ಅಗ್ನಿಸಾಕ್ಷಿ’ ಖ್ಯಾತಿಯ (Agnisakshi) ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾನ್ವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ವೃದ್ಧಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಕನ್ನಡ, ಮಲಯಾಳಂ, ತಮಿಳಿನಲ್ಲಿ ಸಿನಿಮಾ ಮೂಡಿ ಬರಲಿದೆ.