ಮುಂಬೈ: 2022 ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಬಾಲಿವುಡ್ ನಟ-ನಟಿಯರು ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ನ್ಯೂ ಇಯರ್ ಶುಭಾಶಯಗಳನ್ನು ಕೋರಿದ್ದಾರೆ.
ಹೊಸ ವರ್ಷದ ನಿಮಿತ್ತ ಬಾಲಿವುಡ್ ಬಿ-ಟೌನ್ ಮಂದಿ ತಮ್ಮ ಪ್ರೀತಿ ಪಾತ್ರರೊಂದಿಗೆ ಹೇಗೆ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ ಎಂಬುದನ್ನು ಫೋಟೋ ವೀಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು
View this post on Instagram
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಹೊಸ ವರ್ಷವನ್ನು ಆಚರಿಸುತ್ತಿದ್ದು, ತನ್ನ ಪತಿ ವಿರಾಟ್ ಕೊಹ್ಲಿ ಜೊತೆಗಿನ ಸುಂದರವಾದ ಒಂದು ಫೋಟೋವನ್ನು ಇನ್ಸ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಕಳೆದ ವರ್ಷ 2021 ನಮಗೆ ಅತ್ಯಂತ ಸಂತೋಷವನ್ನು ನೀಡಿದ ವರ್ಷವಾಗಿದ್ದು ಧನ್ಯವಾದಗಳೆಂದು ಬರೆದು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಅನುಷ್ಕಾ ಆಫ್ರೀಕಾದ ಪ್ರತಿಷ್ಠಿತ ಹೊಟೆಲ್‍ವೊಂದರಲ್ಲಿ ಕೆಕ್ ಕತ್ತರಿಸುವ ಮೂಲಕ ನ್ಯೂ ಇಯರ್ ಸಂಭ್ರಮವನ್ನು ಆಚರಿಸಿದ ಸನ್ನಿವೇಶವನ್ನು ನೀವು ಕಾಣಬಹುದಾಗಿದೆ. ಇದನ್ನೂ ಓದಿ: ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ
View this post on Instagram
ಮಲೈಕಾ ಅರೋರಾ ಈ ವರ್ಷ ನ್ಯೂ ಇಯರ್ ಸಂಭ್ರಮಾಚರಣೆಯನ್ನು ತನ್ನ ಬಾಯ್ ಫ್ರೆಂಡ್ ಆದ ಅರ್ಜುನ್ ಕಪೂರ್ ಜೊತೆಗೆ ಆಚರಿಸಿದ್ದು, ಅಭಿಮಾನಗಳಿಗೆ ಫೋಟೋದಲ್ಲಿ ಕಿಸ್ ಮಾಡುವ ಮೂಲಕ ಇನ್‍ಸ್ಟಾಗ್ರಾಮ್‍ನಲ್ಲಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
View this post on Instagram
ಸೋನಮ್ ಕಪೂರ್ ತನ್ನ ಪತಿ ಆನಂದ್ ಅಹುಜಾರೊಂದಿಗೆ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆ ಆಚರಿಸಿದ್ದು, ಈ ಸಂಭ್ರಮಾಚರಣೆಯ ಚಿತ್ರಗಳನ್ನು ಸೋನಮ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅವರು ಆನಂದ್ ಅಹುಜಾರಿಗೆ ಚುಂಬಿಸುತ್ತಿದ್ದು, ಈ ದಂಪತಿ ಕಪ್ಪು ಬಣ್ಣದ ಉಡುಗೆಯನ್ನು ಧರಿಸಿದ್ದಾರೆ.
View this post on Instagram
ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿಯವರು ನ್ಯೂ ಇಯರ್ ಸಂಭ್ರಮಾಚರಣೆಯನ್ನು ಹೊಳೆಯುವ ಡ್ರೆಸ್‍ನಲ್ಲಿ ಜಿಗಿಯುವ ಚಮತ್ಕಾರಿ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಶಿಲ್ಪಾ ಅಭಿಮಾನಿಗಳಿಗೆ ಹೊಸ ವರ್ಷದ ಸಂದೇಶವನ್ನು ವಿಭಿನ್ನ ಶೈಲಿಯಲ್ಲಿ ಶುಭಾಶಯ ಕೋರಿದ್ದಾರೆ