Connect with us

Bengaluru City

ಬಾಲಿವುಡ್ ವಿರುದ್ಧ ಸಿಡಿದ ಬಿಜೆಪಿ ಮುಖಂಡ ಸಿ.ಟಿ ರವಿ

Published

on

ಬೆಂಗಳೂರು: ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಬಾಲಿವುಡ್ ವಿರುದ್ಧ ತಮ್ಮ ಟ್ವಿಟ್ಟರ್ ನಲ್ಲಿ ಸಿಡಿದೆದ್ದಿದ್ದಾರೆ.

ಕಿರಣ್ ಕುಮಾರ್ ಎಂಬ ವ್ಯಕ್ತಿ, 500 ವರ್ಷಗಳ ಹಿಂದೆ ವಿಜಯನಗರವು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಹಿಂದೂ ಸಾಮ್ರಾಜ್ಯವಾಗಿತ್ತು. ಇದರ ರಾಜಧಾನಿ ಹಂಪಿ ಆಗಿತ್ತು. ಅಂದಿನಿಂದ ಕಾಲದಲ್ಲಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ರಾಜರ ಆಡಳಿತಾವಧಿಯಲ್ಲಿಯೇ ಹಂಪಿ ವಿಶ್ವ ದರ್ಜೆಯ ನಗರವಾಗಿತ್ತು. ಆದರೆ ಬಾಲಿವುಡ್ ನಲ್ಲಿ ವಿಜಯನಗರದ ಬಗ್ಗೆ ಒಂದು ಸಿನಿಮಾ ಮಾಡಿಲ್ಲ. ಅದೇ ರೀತಿ ಕೃಷ್ಣ ದೇವರಾಯ ಅವರು ಬಗ್ಗೆಯೂ ವೈಭವಿಕರಿಸಿಲ್ಲ” ಎಂದು ಟ್ವೀಟ್ ಮಾಡಿದ್ದರು.

ಕಿರಣ್ ಕುಮಾರ್ ಟ್ವೀಟ್ ಗೆ ರೀಟ್ವೀಟ್ ಮಾಡಿದ ಸಿ.ಟಿ ರವಿ, ಬಾಲಿವುಡ್ ಮುಸ್ಲಿಂ ಆಕ್ರಮಣಕಾರರನ್ನು, ದರೋಡೆಕೋರರನ್ನು ಮತ್ತು ಕಳ್ಳಸಾಗಾಣಿಕೆದಾರರನ್ನು ವೈಭವಿಕರಿಸುವಲ್ಲಿ ತುಂಬಾ ನಿರತರಾಗಿದ್ದಾರೆ. ಅವರಿಗೆ ಹಿಂದೂ ಆಡಳಿತಗಾರರ ಅತ್ಯುತ್ತಮ ಸಾಧನೆಗಳ ಬಗ್ಗೆ ಯೋಚಿಸಲು ಸಮಯವಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಜನವರಿಯಲ್ಲಿ ಬಿಡುಗಡೆಯಾಗಿದ್ದ ಹಿಂದಿಯ `ಪದ್ಮಾವತ್’ ಸಿನಿಮಾಗೆ ಬಿಜೆಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಸಾಕಷ್ಟು ವಿರೋಧಗಳ ನಡುವೆಯೂ ಪದ್ಮಾವತ್ ರಿಲೀಸ್ ಆಗಿ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿತು. ಚಿತ್ರದಲ್ಲಿ ಹಿಂದೂ ದೊರೆಯಾಗಿದ್ದ ಮಹಾರಾವಲ್ ರತನ್ ಸಿಂಗ್ ಪಾತ್ರಕ್ಕಿಂತ, ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿಯನ್ನ ಹೆಚ್ಚಾಗಿ ವೈಭವೀಕರಿಸಲಾಗಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದವು.

Click to comment

Leave a Reply

Your email address will not be published. Required fields are marked *