– ಸಿನಿಮಾ ತಾರೆಯರು ಹಿಂದೂಗಳನ್ನ ಮುಸ್ಲಿಮರನ್ನಾಗಿಸಿದ್ದಾರೆ; ಮತಾಂತರ ಮಾಡೋದು ತಪ್ಪು
– ಮುಸ್ಲಿಂ ಯುವಕರು ಗೋರಕ್ಷಕರಾಗಬೇಕು
ಭೋಪಾಲ್: ಮತಾಂತರಗಳಿಗೆ (Religious Conversion) ಬಾಲಿವುಡ್ (Bollywood) ಚಿತ್ರರಂಗ ಕಾರಣ. ಅಲ್ಲದೇ ಅದರ ಆರಂಭ ಅಲ್ಲಿಂದಲೇ ಆಗಿದೆ ಎಂದು ಮಧ್ಯಪ್ರದೇಶದ (Madhya Pradesh) ಕೇಡರ್‌ನ ಐಎಎಸ್ (IAS) ಅಧಿಕಾರಿ ನಿಯಾಜ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
Advertisement
ದೊಡ್ಡ ದೊಡ್ಡ ಸಿನಿಮಾ ತಾರೆಯರು ಹಿಂದೂಗಳನ್ನು (Hindu) ಮದುವೆಯಾಗುವ (Marriage) ಮೂಲಕ ಮುಸಲ್ಮಾನರನ್ನಾಗಿಸಿದ್ದಾರೆ. ಇಂದಿಗೂ ಇದು ನಡೆಯುತ್ತಿದೆ. ಮತಾಂತರ ನಿಜವಾಗಿಯೂ ತಪ್ಪು. ಏಕೆಂದರೆ ಒಂದು ಧರ್ಮವನ್ನು ಇತರ ಎಲ್ಲಾ ಧರ್ಮಗಳಿಗಿಂತ ಮಿಗಿಲು ಎಂದು ಪರಿಗಣಿಸುತ್ತೇವೆ. ಆದರೆ ಒಂದು ಧರ್ಮಕ್ಕೆ ಸೇರಲು ಬೇರೆ ಧರ್ಮವನ್ನು ಸಣ್ಣದು ಎಂದು ಭಾವಿಸುತ್ತೇವೆ. ಇದು ಸರಿಯಾದ ಕ್ರಮ ಅಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿರಾಜಪೇಟೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ
Advertisement
ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲಾ ಧರ್ಮಗಳಿಗೂ ಸಮಾನವಾದ ಸ್ಥಾನ ನೀಡಲಾಗಿದೆ. ಮದುವೆಯ ನಂತರ ಬೇರೆ ಧರ್ಮಕ್ಕೆ ಮತಾಂತರವಾಗಬೇಕು ಎಂಬ ವಿಚಾರವನ್ನು ಹೇಗೆ ಒಪ್ಪಲು ಸಾಧ್ಯ? ನಿಜವಾಗಿ ಇಬ್ಬರ ನಡುವೆ ಪ್ರೀತಿ ಇದ್ದರೆ, ಇಬ್ಬರೂ ತಮ್ಮ ತಮ್ಮ ಧರ್ಮವನ್ನು ಅನುಸರಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಜನರು ಕಲಾವಿದರನ್ನು ದೇವರಂತೆ ಪರಿಗಣಿಸುತ್ತಾರೆ. ಅಲ್ಲದೆ ನಟರನ್ನು ಅನುಸರಿಸುತ್ತಾರೆ. ಇದರ ಪರಿಣಾಮವಾಗಿ ಇಂದು ಜನರು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಾಗುತ್ತಿದ್ದಾರೆ. ಅಲ್ಲದೇ ಚಲನಚಿತ್ರದಲ್ಲಿನ ನಗ್ನ ದೃಶ್ಯಗಳು ನಮ್ಮ ಯುವ ಪೀಳಿಗೆಯನ್ನು ಹಾಳುಮಾಡುತ್ತಿವೆ ಎಂದಿದ್ದಾರೆ.
ಬಾಲಿವುಡ್, ಹಾಲಿವುಡ್‍ನ್ನು ಜನ ಅನುಕರಣೆ ಮಾಡುವುದನ್ನು ಬಿಟ್ಟು, ದೇಶಪ್ರೇಮದ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಚಲನಚಿತ್ರಗಳು ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ ದೇಶಪ್ರೇಮ, ಸಾಧು ಸಂತರ ವಿಚಾರಗಳನ್ನು ಚಿತ್ರದಲ್ಲಿ ತರಬೇಕು ಎಂದಿದ್ದಾರೆ.
ಖಾನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದ ಟ್ವೀಟ್ ಬಗ್ಗೆ ಮಾತನಾಡಿ, ನಾನು ಮೂರು ವಿಷಯಗಳನ್ನು ಟ್ವೀಟ್ ಮಾಡಿದ್ದೇನೆ. ಮುಸ್ಲಿಂ ಯುವಕರು ಗೋರಕ್ಷಕರಾಗಬೇಕು. ಅವರು ಸಸ್ಯಾಹಾರಿಯಾಗಲು ಪ್ರಯತ್ನಿಸಬೇಕು. ಅಲ್ಲದೇ ಬ್ರಾಹ್ಮಣರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂದು ಪ್ರಕಟಿಸಿದ್ದೇನೆ ಎಂದಿದ್ದಾರೆ.
ಮುಸ್ಲಿಮರು (Muslim) ಗೋರಕ್ಷಕರಾದರೆ (Cow Protector), ಗೋವುಗಳು ಉಳಿಯುತ್ತವೆ. ಅಲ್ಲದೇ ಕೆಲವು ಮುಸ್ಲಿಮರು ಗೋವುಗಳನ್ನು ಗೌರವದಿಂದ ಕಾಣುತ್ತಾರೆ. ಅವುಗಳಿಗೆ ಆಹಾರ ನೀಡುತ್ತಾರೆ. ಇದರೊಂದಿಗೆ ಸಸ್ಯಾಹಾರದ ಅಭ್ಯಾಸವೂ ಪ್ರಪಂಚದಾದ್ಯಂತ ನಡೆಯುತ್ತಿದೆ. ಭೂಮಿಯನ್ನು ಉಳಿಸಲು ಇದನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆದರೆ ಯಾವುದನ್ನು ತಿನ್ನಬೇಕು ಎಂದು ನಿರ್ಧರಿಸಲು ಯಾರನ್ನೂ ನಾನು ಒತ್ತಾಯಿಸಲಾಗುವುದಿಲ್ಲ. ಬ್ರಾಹ್ಮಣ, ಸದಾ ಸತ್ಯದ ಮಾರ್ಗದಲ್ಲಿ ನಡೆಯುತ್ತಾ, ದೇಶವನ್ನು ಮುನ್ನಡೆಸುತ್ತಾನೆ. 3,000 ವರ್ಷಗಳಿಂದ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇಂದಿಗೂ ಸಂತರ ಕಾರ್ಯಕ್ರಮ ಇದ್ದಾಗ ಲಕ್ಷಗಟ್ಟಲೆ ಜನ ಸೇರುತ್ತಾರೆ. ಬ್ರಾಹ್ಮಣರು ಇಂದಿಗೂ ಮಾರ್ಗದರ್ಶಕರು. ಬ್ರಾಹ್ಮಣರ ಆಶೀರ್ವಾದದಿಂದ ಇಲ್ಲಿಯವರೆಗೆ ನಮ್ಮ ಸ್ಥಳದಲ್ಲಿ ಶಾಂತಿ ಕಾಪಾಡಲಾಗಿದೆ. ಕೌಟಿಲ್ಯನಂತಹ ಬ್ರಾಹ್ಮಣ ಭಾರತಕ್ಕೆ ಉತ್ತಮ ಉದಾಹರಣೆ. ನನ್ನ ಟ್ವೀಟ್ ರಾಜಕೀಯ ಪ್ರೇರಿತ ಅಲ್ಲ. ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಬಳಿ ವಿಗ್ರಹಗಳಿಲ್ಲ. ನಾನು ಮೊಹಮ್ಮದ್ ಸಾಬ್ ಹಾಗೂ ಮಹಾನ್ ಚಾಣಕ್ಯನ (Chanakya) ಆರಾಧಕ. ನಾನು ಇಸ್ಲಾಮಿನಲ್ಲಿದ್ದೇನೆ ಮತ್ತು ಹಾಗೆಯೇ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವರ್ಗೀಕೃತ ದಾಖಲೆಗಳ ಕೇಸ್ – ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ