ಮುಂಬೈ: ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಬಾಲಿವುಡ್ ನನ್ನ ‘ಕಪ್ ಆಫ್ ಟೀ’ ಅಲ್ಲ ಎಂದು ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15 ರಂದು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು. ಪ್ರಸ್ತುತ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದಾರೆ. ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಅನೇಕ ಕ್ರಿಕೆಟಿಗರು ಬಾಲಿವುಡ್‍ಗೆ ಹೋಗುತ್ತಾರೆ. ಆದರೆ ಎಂ.ಎಸ್ ಧೋನಿ ಮಾತ್ರ ಇನ್ನೂ ಹೋಗಿಲ್ಲ. ಈ ಕುರಿತು ಮಾಧ್ಯಮದವರು ಪ್ರಶ್ನೆ ಕೇಳಿದಕ್ಕೆ ಅವರು, ಬಾಲಿವುಡ್ ನನ್ನ ಕಪ್ ಆಫ್ ಟೀ ಅಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ‘ಟೇಕ್ ಕೇರ್ ಕಿಂಗ್’ ಎಂದ ಶಾರೂಖ್ ಅಭಿಮಾನಿಗಳು
ಈ ಕುರಿತು ಪ್ರತಿಕ್ರಿಯಿಸಿದ ಅವರು, ಬಾಲಿವುಡ್ ನನ್ನ ಕಪ್ ಆಫ್ ಟೀ ಅಲ್ಲ ಎಂದು ನಿಮಗೆ ತಿಳಿದಿದೆ. ಜಾಹೀರಾತುಗಳಿಗೆ ಸಂಬಂಧಿಸಿದಂತೆ ಅದನ್ನು ಮಾಡಲು ಸಂತೋಷಪಡುತ್ತೇನೆ. ಸಿನಿಮಾಗಳ ವಿಷಯಕ್ಕೆ ಬಂದರೆ ಅದು ತುಂಬಾ ಕಠಿಣದ ಕೆಲಸ ಮತ್ತು ನಿರ್ವಹಿಸಲು ತುಂಬಾ ಕಷ್ಟ. ಸಿನಿಮಾ ತಾರೆಯರು ನಟನೆಯನ್ನು ಮಾಡಲಿ. ಏಕೆಂದರೆ ಅವರು ನಿಜವಾಗಿಯೂ ಚೆನ್ನಾಗಿ ಮಾಡುತ್ತಾರೆ. ನಾನು ಕ್ರಿಕೆಟ್ ಗೆ ಸೀಮಿತವಾಗಿರುತ್ತೇನೆ. ನಾನು ನಟನೆಗೆ ಹತ್ತಿರವಾಗುವುದು ಜಾಹೀರಾತುಗಳಲ್ಲಿ ಮಾತ್ರ, ಅದನ್ನು ಹೊರತು ಪಡೆಸಿ ಯಾವುದೇ ನಟನೆಗೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಧೋನಿ ಜೀವನಚರಿತ್ರೆಯಾಧರಿಸಿ ‘ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಯನ್ನು ಮಾಡಿದ್ದರು. ಈ ಕುರಿತು ಮಾತನಾಡಿದ ಅವರು, ಬ್ಯಾಟ್ಸ್‍ಮನ್‍ನನ್ನು ಸ್ವತಃ ಕ್ಯಾಮೆರಾ ಮುಂದೆ ನೋಡಲು ಕಷ್ಟವಾಗುತ್ತದೆ. ನಟನೆ ಎಂಬುದು ಸುಲಭಕ್ಕೆ ಬರುವಂತಹದಲ್ಲ. ನಾನು ಕ್ರಿಕೆಟ್ ಗೆ ಸೀಮಿತವಾಗಿರುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಶೌಚಾಲಯದಿಂದ ಹೊರಬಂದ ಸಿಂಹ- ವೀಡಿಯೋ ವೈರಲ್