ಬಾಲಿವುಡ್‌ನ ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ (Housefull 5) ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಅಕ್ಷಯ್ ಕುಮಾರ್, ರಿತೇಶ್, ಅಭಿಷೇಕ್ ಬಚ್ಚನ್ ಕಾಮಿಡಿ ನೋಡಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ‘ಹೌಸ್‌ಫುಲ್ 5’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಪ್ರತಿ ಜನ್ಮಕೂ ನೀನೇ ಬೇಕು – ಚಿರು ಜೊತೆಗಿನ ಸ್ಪೆಷಲ್ ಫೋಟೋ ಹಂಚಿಕೊಂಡ ಮೇಘನಾ
View this post on Instagram
ಈ ಹಿಂದಿನ ಹೌಸ್‌ಫುಲ್ 4 ಸಿರೀಸ್‌ಗಳನ್ನು ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದರು. ಈಗ ‘ಹೌಸ್‌ಫುಲ್ 5’ ಚಿತ್ರದ ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಮಲ್ಟಿ ಸ್ಟಾರ್‌ಗಳು ಸಿನಿಮಾದಲ್ಲಿ ನಟಿಸಿದ್ದು, ಟೀಸರ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್
ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಜಾಕ್ವೆಲಿನ್, ಸೋನಮ್ ಬಾಜ್ವಾ, ಫರ್ಧಿನ್ ಖಾನ್, ಶ್ರೇಯಸ್ ತಲ್ಪಡೆ, ಚಂಪಿ ಪಾಂಡೆ, ಜಾನಿ ಲಿವರ್, ಸಂಜಯ್ ದತ್, ಜಾಕಿ ಶ್ರಾಫ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕೌಟುಂಬಿಕ ಸಿನಿಮಾ ಇದಾಗಿದ್ದು, ಕಾಮಿಡಿ ಜೊತೆ ಕ್ರೈಮ್ ಕಥೆಯು ಒಳಗೊಂಡಿದೆ. ಜೂನ್ 6ರಂದು ಸಿನಿಮಾ ರಿಲೀಸ್ ಆಗಲಿದೆ. ತರುಣ್ ಮನ್ಸುಖಾನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಅಂದಹಾಗೆ, 2010ರಲ್ಲಿ ‘ಹೌಸ್‌ಫುಲ್ 1’ ಮೊದಲ ಸರಣಿ ರಿಲೀಸ್ ಆಗಿತ್ತು. 5 ಸಿರೀಸ್‌ಗಳಲ್ಲಿ ಈ ಚಿತ್ರ ಬರುವ ಮೂಲಕ 15 ವರ್ಷಗಳಿಂದ ಚಿತ್ರತಂಡ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹಾಗಾದ್ರೆ ಈ ಬಾರಿಯೂ ‘ಹೌಸ್‌ಫುಲ್ 5’ ಚಿತ್ರ ಸಕ್ಸಸ್ ಕಾಣುತ್ತಾ? ಎಂದು ಕಾದುನೋಡಬೇಕಿದೆ.