ಬಾಲಿವುಡ್ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ರಿಲೀಸ್ ಬೆನ್ನಲ್ಲೇ, ಈ ಚಿತ್ರವನ್ನು ವಿರೋಧಿಸಿದ್ದ ಕೆಲವರು ‘ದಿ ಗುಜರಾತ್ ಫೈಲ್ಸ್’ (Gujarath Files) ಸಿನಿಮಾ ಯಾವಾಗ? ಎಂದು ಪ್ರಶ್ನೆ ಮಾಡಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿರುವ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ (Vinod Kaapri)“ನಾನು ಗುಜರಾತ್ ಫೈಲ್ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದೇನೆ. ಈ ಕುರಿತು ನಿರ್ಮಾಪಕರ ಜತೆ ಮಾತುಕತೆ ಕೂಡ ಆಗಿದೆ. ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಅವರ ಪಾತ್ರವು ವಿವರವಾಗಿ ಇರಲಿದೆ. ಈ ಚಿತ್ರವನ್ನು ತಾವು ತಡೆಯುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನೆ ಮಾಡಿದ್ದಾರೆ.
Advertisement
ಅಲ್ಲದೇ, “ದಿ ಗುಜರಾತ್ ಫೈಲ್ಸ್ ಸತ್ಯ ಘಟನೆಯನ್ನೇ ಆಧರಿಸಿದ್ದು ಆಗಿರುತ್ತದೆ. ಅದಕ್ಕಾಗಿ ನಾನೂ ಕೂಡ ಸಂಶೋಧನೆ ಮಾಡಿದ್ದೇನೆ. ಸತ್ಯ ಮತ್ತು ಪ್ರಾಮಾಣಿಕವಾಗಿ ಈ ಸಿನಿಮಾ ಮಾಡುವೆ. ಪ್ರಧಾನಿ ಅವರು ಹೇಳುವಂತೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವು ನನಗೂ ಬೇಕು. ಅದನ್ನು ಪ್ರಧಾನಿಗಳು ನಮ್ಮ ಚಿತ್ರಕ್ಕೂ ಕೊಟ್ಟರೆ ಅತೀ ಶೀಘ್ರದಲ್ಲೇ ಈ ಸಿನಿಮಾ ಶುರು ಮಾಡುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. ನಿರ್ದೇಶಕ ವಿನೋದ್ ಕಾಪ್ರಿ ಮಾಡಿರುವ ಈ ಟ್ವೀಟ್ ಭಾರೀ ವೈರಲ್ ಆಗಿದೆ. ಅಲ್ಲದೇ, ಅವರು ಕೇಳಿರುವ ಪ್ರಶ್ನೆಯನ್ನು ವಿನೋದ್ ಬೆಂಬಲಿಗರು ಕೇಳಿದ್ದಾರೆ.
Advertisement
#GujaratFiles के नाम से मैं “तथ्यों के आधार पर पर , आर्ट के आधार पर” फ़िल्म बनाने को तैयार हूँ और उसमें आपकी भूमिका का भी “सत्यता” से ,विस्तार से ज़िक्र होगा ।
क्या आप आज देश के सामने मुझे भरोसा देंगे कि फ़िल्म का रिलीज़ नहीं रोकेंगे @narendramodi जी ? https://t.co/X13hfvUKAM
— Vinod Kapri (@vinodkapri) March 15, 2022
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪರ ವಿರೋಧ ಚರ್ಚೆಗಳ ನಡುವೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಲವು ರಾಜಕೀಯ ನಾಯಕರು ಈ ಸಿನಿಮಾ ವೀಕ್ಷಣೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವುದರ ಜೊತೆಗೆ, ಚಿತ್ರ ವೀಕ್ಷಣೆಗೆ ಉಚಿತ ಪ್ರವೇಶದ ಅವಕಾಶವನ್ನು ಕಲ್ಪಿಸಿಕೊಡುತ್ತಿದ್ದಾರೆ. ಈ ಸಿನಿಮಾಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದ ಬಾಲಿವುಡ್ ನಿರ್ದೇಶಕ ವಿನೋದ್ ಈ ಹೊಸ ಆಲೋಚನೆ ಹೊರ ಹಾಕಿದ್ದಾರೆ.