ಬಾಲಿವುಡ್ (Bollywood) ನಟ ಕರಣ್ ಜೋಹರ್ (Karan Johar) ಅವರು ಸಿನಿಮಾರಂಗದಲ್ಲಿ ನಿರ್ದೇಶಕ, ನಿರ್ಮಾಪಕ, ನಿರೂಪಕನಾಗಿ ಗುರುತಿಸಿಕೊಂಡಿದ್ದಾರೆ. 25 ವರ್ಷಗಳು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಸೇವೆ, ಸಾಧನೆ ಗುರುತಿಸಿ ಬ್ರಿಟನ್ ಸಂಸತ್ತು ಗೌರವಿಸಿದೆ.

ಬ್ಯಾರನೆಸ್ ಸ್ಯಾಂಡಿ ಅವರು ಕರಣ್‌ಗೆ ಗೌರವ ಪ್ರದಾನ ಮಾಡಿದರು. ಇಂದು ನನಗೆ ವಿಶೇಷ ದಿನ. ಲಂಡನ್‌ನಲ್ಲಿರುವ ಬ್ರಿಟಿಷ್ ಹೌಸ್ ಆಫ್ ಪಾರ್ಲಿಮೆಂಟ್‌ನಲ್ಲಿ ಗೌರವಾನ್ವಿತ ಬ್ಯಾರನೆಸ್ ವರ್ಮಾರಿಂದ ಗೌರವ ಸಿಕ್ಕಿರೋದು ನನ್ನ ಅದೃಷ್ಟ. ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಕರಣ್ ಬರೆದುಕೊಂಡಿದ್ದಾರೆ.
ಶಾರುಖ್ ಖಾನ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಚಿತ್ರಕ್ಕೆ ನಿರ್ದೇಶಕನಾಗುವ ಮೂಲಕ ಸಿನಿಮಾ ಜಗತ್ತಿಗೆ ಕರಣ್ ಎಂಟ್ರಿ ಕೊಟ್ಟಿದ್ದರು. ಕರಣ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳ ಸಂಭ್ರಮದಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಡಿ ಬರುತ್ತಿದೆ. ಚಿತ್ರಕ್ಕೆ ಕರಣ್ ನಿರ್ದೇಶನ & ನಿರ್ಮಾಣ ಮಾಡಿದ್ದಾರೆ.


