ಬಾಲಿವುಡ್ ನಿರ್ದೇಶಕ ಅವಿನಾಶ್ ದಾಸ್ ಅವರನ್ನು ಅಹಮ್ಮದಾಬಾದ್ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು ಮುಂಬೈನಲ್ಲಿ ಬಂಧಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಎಡಿಟ್ ಮಾಡಲಾದ ಫೋಟೋ ಹಂಚಿಕೊಂಡ ಆರೋಪದಡಿ ಇವರನ್ನು ಅರೆಸ್ಟ್ ಮಾಡಲಾಗಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪೂಜಾ ಸಿಂಘಾಲ್ ಅವರನ್ನು ಈ ಹಿಂದೆ ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ದಾಳಿ ವೇಳೆ ಅವರ ಮನೆಯಲ್ಲಿ ಹಣದ ಕಂತೆಗಳು ದೊರೆತಿದ್ದವು. ಕಂತೆ ಕಂತೆ ಹಣ ಮತ್ತು ಚಿನ್ನಾಭರಣಗಳು ಪತ್ತೆಯಾದ ವಿಡಿಯೋ ಭಾರೀ ವೈರಲ್ ಕೂಡ ಆಗಿದ್ದವು. ಈ ವಿಡಿಯೋವನ್ನಿಟ್ಟುಕೊಂಡು ಅದಕ್ಕೆ ಅಮಿತ್ ಶಾ ಫೋಟೋ ಬಳಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ನಿರ್ದೇಶಕ ಅವಿನಾಶ್. ಅಲ್ಲದೇ ಅಮಿತ್ ಶಾ ಮತ್ತು ಪೂಜಾ ಅವರ ಫೋಟೋವನ್ನು ಎಡಿಟ್ ಮಾಡಿ ಹಾಕಿದ್ದರಂತೆ. ಹೀಗಾಗಿ ಅವರ ಮೇಲೆ ದೂರು ದಾಖಲಾಗಿತ್ತು. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್
ಈ ಕುರಿತು ಬಂಧನದ ಸಾಧ್ಯತೆಯನ್ನು ಅರಿತಿದ್ದ ಅವಿನಾಶ್, ನಿರೀಕ್ಷಣಾ ಜಾಮೀನುಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡು ಇವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತ್ ಶಾ ಅವರ ಫೋಟೋವನ್ನು ದುರುಪಯೋಗ ಪಡಿಸಿದ ದೂರನ್ನು ಕೈ ಬಿಟ್ಟು, ಪೂಜಾ ಸಿಂಘಾಲ್ ಅವರಿಗೆ ಉಡುಪಾಗಿ ರಾಷ್ಟ್ರ ಧ್ವಜವನ್ನು ಬಳಸಿದಂತೆ ಅವಿನಾಶ್ ಎಡಿಟ್ ಮಾಡಿದ್ದರಂತೆ. ಅಲ್ಲದೇ ಮಹಿಳೆಯ ಪಾರ್ಪಡ್ ಚಿತ್ರ ಬಳಕೆ ಮಾಡಿದ್ದನ್ನೂ ಸೇರಿಸಿ, ಬಂಧನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ನಿವಾಸದಿಂದ ಕಚೇರಿಗೆ ತೆರಳುತ್ತಿದ್ದಾರೆ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.