ಬಾಲಿವುಡ್ ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳ ಕಾಲ ರಾರಾಜಿಸಿದ ನಟಿ ಮಧುಬಾಲಾ ನಿಜ ಜೀವನದ ಕಥೆಯನ್ನ ತೆರೆಯ ಮೇಲೆ ತರಲು ಮಧುಬಾಲಾ ಅವರ ಸಹೋದರಿ ಮಧುರ್ ಸಜ್ಜಾಗಿದ್ದಾರೆ. ಮಧುರ್‌ಗೆ `ಶಕ್ತಿಮಾನ್’ ಧಾರಾವಾಹಿ ನಿರ್ಮಾಪಕರು ಸಾಥ್ ನೀಡಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ 20 ವರ್ಷಗಳ ಕಾಲ ಆಳಿದ ನಟಿ ಮಧುಬಾಲಾ ನೈಜ ಜೀವನದ ಕಥೆಯನ್ನ ಬೆಳ್ಳಿಪರದೆಯಲ್ಲಿ ಪ್ರಸ್ತುತ ಪಡಿಸಲು ತೆರೆಮರೆಯಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ. ಸ್ವತಃ ಮಧುಭಾಲಾ ಅವರ ಸಹೋದರಿ ಮಧುರ್ ಈ ಚಿತ್ರವನ್ನು ನಿರ್ಮಾಣ ಮಾಡೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್



