ಬಿಟೌನ್‌ನ ಬ್ಯೂಟಿ ಕರೀನಾ ಕಪೂರ್‌ಗೆ (Kareena Kapoor) ಇಂದು (ಸೆ.21) ಹುಟ್ಟುಹಬ್ಬದ ಸಂಭ್ರಮ. 44ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿರುವ ನಟಿ ಕರೀನಾ ಕಪೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕಿದ್ದಾರೆ. ಕೆಂಪು ಬಣ್ಣದ ಗೌನ್‌ನಲ್ಲಿ ಸಖತ್ತಾಗೇ ಅಟ್ರ್ಯಾಕ್ಟ್ ಮಾಡ್ತಿದ್ದಾರೆ ಕರೀನಾ. ಇನ್‌ಸ್ಟಾದ ಪೋಸ್ಟ್‌ಗೆ ಫ್ಯಾನ್ಸ್ ಕಮೆಂಟ್ ಮೇಲೆ ಕಮೆಂಟ್ ಹಾಕ್ತಿದ್ದಾರೆ.
ಅಂದಹಾಗೆ ಕರೀನಾ ಬರ್ತ್‌ಡೇ (Birthday) ಜೊತೆಗೆ ಮತ್ತೊಂದು ಸಂತೋಷದ ಸುದ್ದಿ ಕೂಡಾ ಅಭಿಮಾನಿಗಳು ಹಬ್ಬ ಮಾಡೋಕೆ ಕಾರಣವಾಗಿದೆ. ಹೌದು, ಕರೀನಾ ಕಪೂರ್ ಬಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟು 25 ವರ್ಷವಾಗಿದೆ. ಈ ಹಿನ್ನೆಲೆ ಬಾಲಿವುಡ್‌ನಲ್ಲಿ ಕೆಕೆಕೆ ಫಿಲ್ಮ್ ಫೆಸ್ಟಿವಲ್ ಮಾಡೋಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಿಂದ ಕಲಿತ ಪಾಠ.. ಚೀನಾಗೆ ಟಕ್ಕರ್ ಕೊಡಲು ‘ಮೌಂಟೆನ್ ಟ್ಯಾಂಕ್’ ಅಭಿವೃದ್ಧಿ – ಇಂಡಿಯನ್ ಆರ್ಮಿಗೆ ಆನೆ ಬಲ
View this post on Instagram
ಕೆಕೆಕೆ ಫಿಲ್ಮ್ ಫೆಸ್ಟಿವಲ್, 15 ನಗರಗಳಲ್ಲಿ 30 ಚಿತ್ರಮಂದಿರಗಳಲ್ಲಿ ವಿಶೇಷ ಚಲನಚಿತ್ರೋತ್ಸವ ನಡೆಸಲಾಗುತ್ತೆ. `ಜಬ್ ವಿ ಮೇಟ್’, `ಚಮೇಲಿ’, `ಹೀರೋಯಿನ್’ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಮಾಡೆಲಿಂಗ್ ಹಾಗೂ ಸಿನಿಮಾ ರಂಗದಲ್ಲಿ ಈಗಲೂ ತೊಡಗಿಸಿಕೊಂಡಿರುವ 44 ವರ್ಷದ ಈ ಬ್ಯೂಟಿ ಕರೀನಾ.
ಮಾಡೆಲಿಂಗ್ ಹಾಗೂ ಸಿನಿಮಾ ರಂಗದ ಕೆಲಸದ ನಡೆವೆಯೂ ಫ್ಯಾಮಿಲಿಗೂ ಸಮಯವನ್ನ ಮೀಸಲಿಟ್ಟಿರುತ್ತಾ ಕರೀನಾ ಕಪೂರ್. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಖುಷಿ ಒಂದು ಕಡೆಯಾದ್ರೆ, 44 ವರ್ಷದ ಹುಟ್ಟುಹಬ್ಬ ಮತ್ತೊಂದು ತರದ ಖುಷಿ ಕೊಟ್ಟಿದೆ. ಇನ್ನು ಹೆಚ್ಚು ಹೆಚ್ಚು ಸಿನಿಮಾಗಳನ್ನ ಮಾಡಿ ಕರೀನಾ ಅಭಿಮಾನಿಗಳನ್ನ ರಂಜಿಸಲಿ ಅಂತಾ ಹಾರೈಸೋಣ.ಇದನ್ನೂ ಓದಿ: ದೆಹಲಿ ನೂತನ ಸಿಎಂ ಆಗಿ ಅತಿಶಿ ಇಂದು ಪ್ರಮಾಣ ವಚನ ಸ್ವೀಕಾರ