ಆಲಿಯಾ ಭಟ್ -ರಣ್‌ಬೀರ್ ಕಪೂರ್ ಫಸ್ಟ್ ಲವ್ ಶುರುವಾಗಿದ್ದು ಹೇಗೆ.?

Public TV
1 Min Read
alia bhat 1

ಬಾಲಿವುಡ್ ಅಂಗಳದ `ಲವ್ ಬರ್ಡ್ಸ್’ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದರು. ಈಗ ಈ ಜೋಡಿಯ ಕುರಿತು ಅಚ್ಚರಿಯ ವಿಚಾರದ ಕುರಿತು ಆಲಿಯಾ ಮಾತನಾಡಿದ್ದಾರೆ. ರಣ್‌ಬೀರ್ ಜೊತೆಗಿನ ತಮ್ಮ ಮೊದಲ ಭೇಟಿಯ ಕುರಿತು ಸಂದರ್ಶನವೊಂದರಲ್ಲಿ ಆಲಿಯಾ ತಿಳಿಸಿದ್ದಾರೆ.

alia bhatt and ranbir kapoor marriage 1

ಕರಣ್ ಜೋಹರ್ ನಿರ್ದೇಶನದ `ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಿತರಾದ ರಾಧೆ ಆಲಿಯಾ ಭಟ್ ಇದೀಗ ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದಿದೆ. 2 ಸ್ಟೇಟ್ಸ್, ಹೈವೆ, ಡಿಯರ್ ಜಿಂದಗಿ, ಆರ್‌ಆರ್‌ಆರ್, ಗಂಗೂಬಾಯಿ ಕಾಥಿಯಾವಾಡಿ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ್ರು. ಇದೀಗ ಹಾಲಿವುಡ್ ರಂಗದಲ್ಲೂ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ರಣ್‌ಬೀರ್ ಮತ್ತು ಆಲಿಯಾ ಹಸೆಮಣೆ ಏರಿದ್ದರು. ಸಂದರ್ಶನವೊಂದರಲ್ಲಿ ತಮ್ಮ ಮತ್ತು ರಣ್‌ಬೀರ್ ಭೇಟಿ ಹೇಗೆ ಆಯ್ತು ಎಂಬುದನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗಾಗಿ ಒಂದಾದ ಸ್ಯಾಂಡಲ್ ವುಡ್ ಸ್ಟಾರ್ಸ್

Alia Bhatt Ranbir Kapoor wedding

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಣ್‌ಬೀರ್ ನಟನೆಯ `ಬ್ಲ್ಯಾಂಕ್‌ʼ ಚಿತ್ರದ ಸೆಟ್‌ನಲ್ಲಿ ಆಲಿಯಾ ಮೊದಲ ಭೇಟಿಯಾಗಿದ್ದು, ಆಲಿಯಾಗಿನ್ನು 11 ವರ್ಷವಾಗಿತ್ತು. ರಣ್‌ಬೀರ್ ಜತೆ ಮಿನಿ ಫೋಟೋಶೂಟ್ ಮಾಡಿದ್ದು, ಅಲ್ಲಿ ಆತನ ಹೆಗಲ ಮೇಲೆ ತಲೆ ಹಾಕಿದ್ದೇನೆ ಎಂದು ಆಲಿಯಾ ತಿಳಿಸಿದ್ದಾರೆ. ಆ ಸಮಯದಲ್ಲಿಯೇ ರಣ್‌ಬೀರ್ ನೀವು ಫ್ಲರ್ಟಿಂಗ್ ಮಾಡುತ್ತಿದ್ದೀರಿ ಎಂದು ಸಂಜಯ್ ಈಗಲೂ ಹೇಳುತ್ತಾರೆ. ಆದರೆ ಆ ಸಮಯದಲ್ಲಿ ಫ್ಲರ್ಟಿಂಗ್ ಎಂದರೆ ಎನು ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಜೋಡಿ `ಬ್ರಹ್ಮಾಸ್ತ್ರ’ ಚಿತ್ರದ ಪ್ರಚಾದ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *