BollywoodDistrictsKarnatakaLatestMain PostSandalwood

`ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

`ಕೆಜಿಎಫ್ ಚಾಪ್ಟರ್ 2′ ಪ್ಯಾನ್ ಇಂಡಿಯಾ ಚಿತ್ರವಾಗಿ ದೇಶದೆಲ್ಲಡೆ ಚಿತ್ರ ಲೂಟಿ ಮಾಡ್ತಿದೆ. ರಾಕಿಭಾಯ್ ಸಿನಿಮಾ ಬಂದ ಮೇಲೆ ಬಾಲಿವುಡ್ ಸಿನಿಮಾ ರಂಗ ಬೆದರಿದೆ. ಇಡೀ ಸಿನಿಮಾರಂಗವನ್ನೇ `ಕೆಜಿಎಫ್ 2′ ಚಿತ್ರ ಆವರಿಸಿಕೊಂಡಿದೆ. ಯಶ್ ಮೇನಿಯಾ ಶುರುವಾದ ಮೇಲೆ ಬಾಲಿವುಡ್ ಕಥೆ ಮುಗಿದೆ ಹೋಯ್ತು ಎನ್ನುವ ಮಾತು ಕೇಳಿ ಬರುತ್ತಿದೆ.

kgf 2

ʻಕೆಜಿಎಫ್ 2ʼ ಸಕ್ಸಸ್ ಅಲೆ ಇದೀಗ ಬಾಲಿವುಡ್ ಸ್ಟಾರ್‌ಗಳಿಗೆ ಮತ್ತು ನಿರ್ದೇಶಕರಿಗೆ ಚಿಂತೆ ತಂದಿದೆ. ಹೇಗಾದರೂ ಮಾಡಿ ಬಾಲಿವುಡ್‌ನ ಮೊದಲ ಚಾರ್ಮ್ ತರುವ ಪ್ರಯತ್ನದಲ್ಲಿ ಅಲ್ಲಿನ ನಿರ್ದೇಶಕರು, ಸ್ಟಾರ್‌ಗಳು ತೊಡಗಿದ್ದಾರೆ. ಹೀಗಿರುವಾಗಲೇ ಕಿಂಗ್ ಖಾನ್ ಶಾರುಖ್ ಅವರು ಹೊಸ ಚಿತ್ರದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ. ಸೋಲಿಲ್ಲದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಜತೆ ಕೆಲಸ ಶುರು ಮಾಡಿದ್ದಾರೆ.

ʻಪುಷ್ಪʼ, ʻಆರ್‌ಆರ್‌ಆರ್‌ʼ, ʻಕೆಜಿಎಫ್ 2ʼ ಚಿತ್ರದ ಕಲೆಕ್ಷನ್‌ಗೆ ಬಾಲಿವುಡ್ ಸಿನಿಮಾಗಳಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಈ ಚಿತ್ರಗಳ ಸಕ್ಸಸ್‌ನಿಂದ ಬಾಲಿವುಡ್ ಮಂದಿ ಮಂಕಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಿಂದ ಹಿಂದಿ ಸಿನಿಮಾಗಳಿಗೆ ಸೋಲಿನ ರುಚಿ ತಟ್ಟಿದೆ. ಹೀಗಿರುವಾಗಲೇ ಹಿಂದಿ ಚಿತ್ರಗಳನ್ನ ಮೇಲಕ್ಕೆತ್ತಬೇಕು ಎಂಬ ನಿಟ್ಟಿನಲ್ಲಿದ್ದಾರೆ ಬಿಟೌನ್ ಸ್ಟಾರ್ಸ್.‌ ಇದನ್ನೂ ಓದಿ:ಚಿತ್ರರಂಗದಲ್ಲೇ ಧೂಳಿಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

ಸದ್ಯ ಶಾರುಖ್ ನಟನೆಯ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. `ಪಠಾಣ್’ ಮತ್ತು ಅಟ್ಲಿ ನಿರ್ದೇಶನದ ಚಿತ್ರ, ಮತ್ತು ರಾಜಕುಮಾರ್ ಹಿರಾನಿ ನಿರ್ದೇಶನದಲ್ಲಿ ಚಿತ್ರದಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಪಂಜಾಬ್ ಗ್ರಾಮದಲ್ಲಿ ಶೂಟಿಂಗ್ ಶುರುವಾಗಿದೆ. ಹಿಂದಿ ಚಿತ್ರರಂಗದಲ್ಲಿ ಬಿಗ್ ಹಿಟ್ ಚಿತ್ರ ಕೊಡಬೇಕು ಎಂಬ ನಿಟ್ಟಿನಲ್ಲಿ ತೆರೆಮರೆಯಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ. ಮುಂದೆ ಚಿತ್ರರಂಗದಲ್ಲಿ ಎನೆಲ್ಲ ಸಂಚಲನ ಸೃಷ್ಟಿಯಾಗಬಹುದು ಅಂತಾ ಕಾದು ನೋಡಬೇಕಿದೆ.

 

Leave a Reply

Your email address will not be published.

Back to top button