ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್‍ಗೆ ಕೊಲೊನ್ ಇನ್‌ಫೆಕ್ಷನ್ ಆಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರವಷ್ಟೇ ಅವರ ತಾಯಿ ತೀರಿಕೊಂಡಿದ್ದರು. ಆದರೆ ಲಾಕ್‍ಡೌನ್ ಹಿನ್ನೆಲೆ ರರ್ಫಾನ್ ಖಾನ್ ಅವರು ತಾಯಿಯ ಅಂತಿಮ ಸಂಸ್ಕಾರಕ್ಕೆ ಹೋಗಿರಲಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಿಮ ದರ್ಶನ ಪಡೆದಿದ್ದರು.
Advertisement
Actor Irrfan Khan is admitted to ICU at Kokilaben Hospital in Mumbai because of a colon infection. We would keep everyone updated. He is under doctor’s observation: Statement (File pic) pic.twitter.com/q7pHesHOFi
— ANI (@ANI) April 28, 2020
Advertisement
ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಅಸ್ಪತ್ರೆಯ ಐಸಿಯುನಲ್ಲಿ ಇರ್ಫಾನ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ವೈದ್ಯಾಧಿಕಾರಿಗಳು ದೃಢಪಡಿಸಿದ್ದು, ಕೊಲೊನ್ ಇನ್‌ಫೆಕ್ಷನ್ ನಿಂದಾಗಿ ಇರ್ಫಾನ್ ಅವರನ್ನು ಅಬ್ಸರ್ವೇಶನ್‍ನಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಈ ಕುರಿತು ಇರ್ಫಾನ್ ಖಾನ್ ಅವರ ವಕ್ತಾರರು ಸಹ ಹೇಳಿಕೆ ಬಿಡುಗಡೆ ಮಾಡಿದ್ದು, ಇರ್ಫಾನ್ ಖಾನ್ ಅವರು ಕೊಲೊನ್ ಇನ್‌ಫೆಕ್ಷನ್ ನಿಂದಾಗಿ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸತ್ಯ. ನಾವೆಲ್ಲರೂ ತುಂಬಾ ಎಚ್ಚರಿದಿಂದ ಇದ್ದೇವೆ. ವೈದ್ಯರ ಪರಿವೀಕ್ಷಣೆಯಲ್ಲಿದ್ದಾರೆ. ಅವರ ಶಕ್ತಿ ಹಾಗೂ ಧೈರ್ಯ ಈ ಸೋಂಕಿನ ವಿರುದ್ಧ ಅವರು ಹೋರಾಡಲು ಸಹಾಯ ಮಾಡಿದೆ. ಅವರ ಆತ್ಮಶಕ್ತಿ ಬಲವಾಗಿದ್ದು, ಅವರ ಹಿತೈಶಿಗಳ ಹಾರೈಕೆಗಳು ಸಹ ಅವರ ಮೇಲಿದೆ. ಹೀಗಾಗಿ ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.
Advertisement
ಇರ್ಫಾನ್ ಅವರಿಗೆ ನ್ಯೂರೋಎಂಡೋಕ್ರೈನ್ ಗಡ್ಡೆ ಇರುವುದು 2018ರಲ್ಲೇ ತಿಳಿದಿತ್ತು. ಇದಕ್ಕಾಗಿ ಅವರು ವಿದೇಶದಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಶನಿವಾರ ಅವರ ತಾಯಿ ಸಾಯಿಬಾ ಬೇಗಂ ಅವರನ್ನು ಕಳೆದುಕೊಂಡಿರುವ ಅವರು ವಿಡಿಯೋ ಕಾಲ್ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.