ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ 600 ರೂ. ಬೆಲೆಯ ಸೀರೆ ತೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಂಗನಾ ಸೀರೆ ತೊಟ್ಟಿರುವ ಫೋಟೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಸೋದರಿ ರಂಗೋಲಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಕಂಗನಾ ಕೋಲ್ಕತ್ತಾದಲ್ಲಿ 600 ರೂ. ನೀಡಿ ಈ ಸೀರೆಯನ್ನು ಖರೀದಿಸಿದ್ದರು. ಇದೇ ಸೀರೆಯನ್ನು ಧರಿಸಿ ಜೈಪುರದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಸೀರೆ ದೊರೆತಿದೆ ಅಂದ್ರೆ ನಂಬಲು ಸಾಧ್ಯವಾಗಲ್ಲ. ಕಾರ್ಮಿಕರು ಒಳ್ಳೆಯ ಗುಣಮಟ್ಟದ ಸೀರೆಯನ್ನು ಅಲ್ಪ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ಕಾರ್ಮಿಕರ ಪರಿಶ್ರಮಕ್ಕೆ ಕಡಿಮೆ ಪ್ರತಿಫಲ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
https://twitter.com/Rangoli_A/status/1163002123698622464
ಮತ್ತೊಂದು ಟ್ವೀಟ್ ನಲ್ಲಿ ಅಂತರಾಷ್ಟ್ರೀಯ ಬ್ರ್ಯಾಂಡ್ ಬದಲು ದೇಶಿ ಬಟ್ಟೆಗಳನ್ನು ಧರಿಸೋದು ಉತ್ತಮ. ಇದರಿಂದ ದೇಶದ ಕಾರ್ಮಿಕರ ಜೀವನಮಟ್ಟ ಸಹ ಸುಧಾರಣೆ ಆಗುತ್ತದೆ ಎಂದು ರಂಗೋಲಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
https://twitter.com/Rangoli_A/status/1163002328607125509