ಮೇಕಪ್ ಹಾಕಿ ಯುವನಟಿಯರನ್ನು ನಾಚಿಸುವಂತೆ ಕಾಣ್ತಿದ್ದ 40ರ ನಟಿಯರ ಅಸಲಿ ಮುಖ

Public TV
2 Min Read
actress maekup

ಮುಂಬೈ: ಮೇಕಪ್ ಹಾಕಿ ಯುವನಟಿಯರಿಗೆ ಕಾಂಪಿಟೇಶನ್ ನೀಡುತ್ತಿದ್ದ 40ರ ನಟಿಯರ ಮೇಕಪ್ ಇಲ್ಲದಿರುವ ಫೋಟೋಗಳು ಈಗ ವೈರಲ್ ಆಗಿದೆ. 40ರ ವಯಸ್ಸಿನಲ್ಲೂ ಮೇಕಪ್ ಹಾಕಿ ತಮ್ಮ ಫಿಟ್ನೆಸ್ ಮೆಂಟೇನ್ ಮಾಡುತ್ತಿದ್ದಾರೆ.

ಬಾಲಿವುಡ್ ಧಕ್-ಧಕ್ ಬೆಡಗಿ ಮಾಧುರಿ ದೀಕ್ಷಿತ್ ಯಾವಾಗಲೂ ತನ್ನ ಗ್ಲಾಮರಸ್ ಲುಕ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಆಗುತ್ತಿರುತ್ತಾರೆ. ಆದರೆ ಅವರನ್ನು ಮೇಕಪ್ ಇಲ್ಲದೇ ನೋಡಿದರೆ ಅಭಿಮಾನಿಗಳು ಅವರನ್ನು ಗುರುತು ಹಿಡಿಯುವುದ್ದಕ್ಕೆ ಕಷ್ಟಪಡುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧುರಿ ಅವರ ಮೇಕಪ್ ಹಾಗೂ ಮೇಕಪ್ ಇಲ್ಲದಿರುವ ಫೋಟೋ ನೋಡಿದರೆ ವ್ಯತ್ಯಾಸ ತಿಳಿಯುತ್ತದೆ.

madhuri

ಬಾಲಿವುಡ್ ನಟಿ ತಬ್ಬು ತಮ್ಮ ಅತ್ಯುತ್ತಮ ಅಭಿನಯದಿಂದ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ತಬ್ಬು 1985 ಇಸವಿಯಲ್ಲಿ ‘ಹಮ್ ನೌಜವಾನ್’ ಚಿತ್ರದಿಂದ ಬಾಲಿವುಡ್‍ಗೆ ಎಂಟ್ರಿ ನೀಡಿದ್ದರು. ತಬ್ಬು ಅವರಿಗೆ 46 ವರ್ಷವಾಗಿದ್ದು, ಈಗಲೂ ಸ್ಕ್ರೀನ್ ಮೇಲೆ ಸುಂದರವಾಗಿ ಕಾಣಿಸುತ್ತಾರೆ. ಆದರೆ ತಬ್ಬು ಮೇಕಪ್ ಇಲ್ಲದೇ ಇರುವ ಫೋಟೋ ನೋಡಿದರೆ ಜನರು ಆಶ್ಚರ್ಯಪಡುತ್ತಾರೆ. ತಬ್ಬು ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆಂದು ನೀವು ಒಮ್ಮೆ ಈ ಫೋಟೋ ನೋಡಿ.

tabbu

ಹಿರಿಯ ನಟಿ ರೇಖಾ ಅವರನ್ನು ನೋಡಿದರೆ ಅವರು ತುಂಬಾ ಯಂಗ್ ಆಗಿ ಕಾಣಿಸುತ್ತಾರೆ. ವಯಸ್ಸಾದ ಮೇಲೂ ಹೀಗಿನ ಕಾಲದ ನಟಿಯರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸುಂದರವಾಗಿ ಕಾಣುತ್ತಾರೆ. ಸಾಕಷ್ಟು ಜನರು ಇವರ ಸೌಂದರ್ಯದ ಸೀಕ್ರೆಟ್ ಎನೂ ಎಂದು ಯೋಚಿಸುತ್ತಿರುತ್ತಾರೆ?. ಆದರೆ ಅಭಿಮಾನಿಗಳು ರೇಖಾ ಅವರ ಮೇಕಪ್ ಇಲ್ಲದಿರುವ ಫೋಟೋವನ್ನು ನೋಡಿದರೆ ಅವರ ವಯಸ್ಸನ್ನು ಸುಲಭವಾಗಿ ಕಂಡು ಹಿಡಿಯಬಹುದು.

rekha

ನಟಿ ರವೀನಾ ಟಂಡನ್ ಕೂಡ ತಮ್ಮ ಉತ್ತಮ ಅಭಿನಯ ಹಾಗೂ ಸೌಂದರ್ಯದಿಂದ ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ರವೀನಾ ತಮ್ಮ ‘ಮಾತೃ’ ಚಿತ್ರದಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ ಈಗ ಅವರಿಗೆ ವಯಸ್ಸಾಗುತ್ತಿರುವುದು ಸುಲಭವಾಗಿ ಕಾಣಿಸುತ್ತದೆ. ಹಲವು ಬಾರಿ ರವೀನಾ ಮೇಕಪ್ ಇಲ್ಲದೇ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಮೇಕಪ್ ಇಲ್ಲದೇ ಅವರನ್ನು ನೋಡಿದರೆ ಜನರಿಗೆ ನಂಬಲು ಅಸಾಧ್ಯವಾಗುತ್ತದೆ.

raveena tandan 2

ಬಾಲಿವುಡ್ 90ರ ಬೆಡಗಿ ಕರೀಶ್ಮಾ ಕಪೂರ್ ಅವರು ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಇಂದಿಗೂ ಕರೀಶ್ಮಾ ಅವರು ತಮ್ಮ ಹಾಟ್ ಅವತಾರದಿಂದ ಲೈಮ್‍ಲೈಟ್‍ನಲ್ಲಿರುತ್ತಾರೆ. ಕರೀಶ್ಮಾ ಕಪೂರ್ ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆ ಎನ್ನುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಕರೀಶ್ಮಾ ಅವರ ಮೇಕಪ್ ಇಲ್ಲದಿರುವ ಫೋಟೋ ನೋಡಿದರೆ ಅವರ ವಯಸ್ಸನ್ನು ಜನರು ಸುಲಭವಾಗಿ ಕಂಡು ಹಿಡಿಯುತ್ತಾರೆ.

karishma kapoor

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *