ಬಾಲಿವುಡ್ (Bollywood) ಬ್ಯೂಟಿ ವಿದ್ಯಾ ಬಾಲನ್ (Vidya Balan) ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲವು ತಿಂಗಳುಗಳಿಂದ ಪ್ರೆಗ್ನೆಂಟ್ ಎಂದು ಹಬ್ಬಿಸಿದವರಿಗೆ `ಡರ್ಟಿ ಪಿಕ್ಚರ್’ (The Dirty Picture) ನಟಿ ಖಡಕ್ ಉತ್ತರ ನೀಡಿದ್ದಾರೆ. ಪ್ರೆಗ್ನೆನ್ಸಿ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ
ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ನಟಿ ವಿದ್ಯಾ ಬಾಲನ್ ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸೆಲ್ಫ್ ಲವ್ (Self Love) ಮತ್ತು ಪರ್ಸನಲ್ ಲೈಫ್‌ಗೆ ಸಂಬಂಧಿಸಿದ ಒಂದಿಷ್ಟು ವಿಚಾರಗಳನ್ನ ನಟಿ ವಿದ್ಯಾ ಬಾಲನ್ (Vidya Balan) ಹಂಚಿಕೊಂಡಿದ್ದಾರೆ.
ದೇವರಿಗೇ ಗೊತ್ತು ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು. ನಾನು ದಪ್ಪಗಿರುವೆ ಇದು ನನ್ನ ದೇಹ, ಪ್ರೆಗ್ನೆಂಟ್ ಆದಾಗ ಹೇಗೆ ಕಾಣಿಸುತ್ತೀನಿ ಎಂದು ಗೊತ್ತಿಲ್ಲ ಆದರೆ ಈಗ ನೋಡಲು ಹೀಗಿರುವೆ. ಇಷ್ಟು ವರ್ಷ ಚಿತ್ರರಂಗದಲ್ಲಿ ಇರುವೆ ಈಗಲೂ ನಿಮಗೆ ಅರ್ಥವಾಗಿಲ್ವಾ ನಾನು ಸೈಜ್ ಝಿರೋ ಇಲ್ಲ ನಾನು ಸಣ್ಣ ಎಂದೂ ಇರಲಿಲ್ಲ ಎಂದು. ನನ್ನ ಬಗ್ಗೆ ನಾನು ನೆಗೆಟಿವ್ ಯೋಚನೆ ಮಾಡುವುದಿಲ್ಲ. ನಾನು ಸಂಬಂಧಗಳಿಗೆ ಹೆಚ್ಚಿಗೆ ಗೌರವ ಕೊಡುವ ವ್ಯಕ್ತಿ ಜೊತೆಗೆ ನನ್ನ ಕೆಲಸವನ್ನು ಹೆಚ್ಚಿಗೆ ಪ್ರೀತಿಸುವ ವ್ಯಕ್ತಿ ಎಂದು ಹೇಳುವ ಮೂಲಕ ಪ್ರೆಗ್ನೆಂಟ್ ಸುದ್ದಿ ಹಬ್ಬಿಸುವವರಿಗೆ ಖಡಕ್ ಉತ್ತರ ನೀಡಿದ್ದಾರೆ.
ವಿದ್ಯಾ ಬಾಲನ್ ನಟಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಬರಲು ನಟಿ ಸಜ್ಜಾಗಿದ್ದಾರೆ.