ತೃತೀಯ ಲಿಂಗಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್ ಕಥೆ ಹೇಳಲು ಸಜ್ಜಾದ ಸುಶ್ಮಿತಾ ಸೇನ್

Public TV
2 Min Read
sushmitha sen

ಬಾಲಿವುಡ್ (Bollywood) ಬ್ಯೂಟಿ ಸುಶ್ಮಿತಾ ಸೇನ್ (Sushmitha Sen) ಅವರಿಗೆ ಕೆಲ ತಿಂಗಳುಗಳ ಹಿಂದೆ ಹಾರ್ಟ್ ಅಟ್ಯಾಕ್ ಆಗಿತ್ತು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ಬ್ಯಾಕ್ ಟು ಆ್ಯಕ್ಷನ್ ಅಂತಾ ‘ತಾಲಿ’ (Taali) ಸಿನಿಮಾ ಮೂಲಕ ಕಮ್‌ಬ್ಯಾಕ್ ಆಗ್ತಿದ್ದಾರೆ. ತೃತೀಯ ಲಿಂಗಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್ ಅವರ ಜೀವನದ ಕತೆಯನ್ನ ಹೇಳಲು ರೆಡಿಯಾಗಿದ್ದಾರೆ.

sushmitha sen

ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿ ಸುಶ್ಮಿತಾ ಸೇನ್ ಬ್ಯುಸಿಯಾಗಿದ್ದಾರೆ. ತಾಲಿ ಸಿನಿಮಾದ ಟೀಸರ್ ಲುಕ್‌ನಿಂದ ನಟಿ ಗಮನ ಸೆಳೆಯುತ್ತಿದ್ದಾರೆ. ಟೀಸರ್ ಅನ್ನು ಹಂಚಿಕೊಳ್ಳುವಾಗ, ಸುಶ್ಮಿತಾ ಸೇನ್ ಬರೆದಿದ್ದಾರೆ – ನಿಂದನೆಯಿಂದ ಚಪ್ಪಾಳೆಯವರೆಗೆ ಪ್ರಯಾಣದ ಈ ಕಥೆ. ಭಾರತದ ತೃತೀಯಲಿಂಗಿಗಾಗಿ ಹೋರಾಡಿದ ಶ್ರೀ ಗೌರಿ ಸಾವಂತ್ (ShreeGauri Sawant) ಅವರ ಕಥೆ. ಆಗಸ್ಟ್ 15 ರಂದು ಒಟಿಟಿಯಲ್ಲಿ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

sushmitha sen 1

ಟೀಸರ್‌ನ ಆರಂಭದಲ್ಲಿ, ಸುಶ್ಮಿತಾ ಹೇಳುತ್ತಾರೆ- ನಾನು ಗೌರಿ, ಕೆಲವರು ಅವರನ್ನು ನಪುಂಸಕ ಮತ್ತು ಕೆಲವರು ಸಾಮಾಜಿಕ ಕಾರ್ಯಕರ್ತೆ ಎಂದು ಕರೆಯುತ್ತಾರೆ. ಕೆಲವರು ಇದನ್ನು ಗಿಮಿಕ್ ಮತ್ತು ಕೆಲವರು ಗೇಮ್ ಚೇಂಜರ್ ಎಂದು ಕರೆಯುತ್ತಾರೆ. ಇದು ನಿಂದನೆಯಿಂದ ಹಿಡಿದು ಚಪ್ಪಾಳೆ ತಟ್ಟುವವರೆಗಿನ ಪಯಣದ ಕಥೆ. ನನಗೆ ಸ್ವಾಭಿಮಾನ, ಗೌರವ, ಸ್ವಾತಂತ್ರ‍್ಯ, ಈ ಮೂರೂ ಬೇಕು. ಟೀಸರ್‌ನಲ್ಲಿ ಸುಶ್ಮಿತಾ, ಅವರ ಅವತಾರ ಅದ್ಭುತವಾಗಿ ಹೇಳಿದ್ದಾರೆ. ಇದನ್ನೂ ಓದಿ:ಪತಿಗೆ ಡಿವೋರ್ಸ್‌ ನೀಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಆ್ಯಂಕರ್ ಚೈತ್ರಾ

ತಾಲಿ ಪೋಸ್ಟರ್ ಅನ್ನು ಸ್ವಲ್ಪ ಸಮಯದ ಹಿಂದೆ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಸುಶ್ಮಿತಾ ಲುಕ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಸೀರೆ ಉಟ್ಟು, ಹಣೆಯ ಮೇಲೆ ದೊಡ್ಡ ಕೆಂಪು ಕುಂಕುಮ, ಕೊರಳಲ್ಲಿ ಹಾರ ಹಾಕಿದ್ದ ಸುಶ್ಮಿತಾ ದಿಟ್ಟ ನೋಟ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ತಾಲಿ’ ನಂತರ ಸುಶ್ಮಿತಾ ಆರ್ಯ 3 (Arya 3) ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯ ಎರಡು ಸೀಸನ್‌ಗಳು ಅದ್ಭುತವಾಗಿದ್ದವು. ಈಗ ಮೂರನೇ ಸೀಸನ್ ತಯಾರಿಯಲ್ಲಿ ಸುಶ್ಮಿತಾ ಬ್ಯುಸಿಯಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article