Connect with us

Cinema

ಔಟ್ ಫಿಟ್ ಲುಕ್‍ನಲ್ಲಿ ಸನ್ನಿ – ಫೋಟೋ ವೈರಲ್!

Published

on

ಮುಂಬೈ: ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಇದೀಗ ಅವರ ಫೋಟೋವೊಂದು ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದೆ.

ಬಾಲಿವುಡ್ ನಟಿ ಸನ್ನಿ ಅನೇಕ ವಿಷಯಗಳಲ್ಲಿ ಸುದ್ದಿಯಾಗುತ್ತಿದ್ದು, ಇದೀಗ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಆ ಫೋಟೋ ವೈರಲ್ ಆಗಿದೆ. ಅವರು ಆ ಫೋಟೋದಲ್ಲಿ ಧರಿಸಿರುವ ಉಡುಪಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋದಲ್ಲಿ ಸನ್ನಿ ಬಿಳಿ ಬಣ್ಣದ ಟ್ಯೂಬ್ ಟಾಪ್ ಧರಿಸಿದ್ದು, ಕ್ರೀಂ ಬಣ್ಣದ ಸ್ಕರ್ಟ್ ತೊಟ್ಟಿದ್ದಾರೆ. ಜೊತೆಗೆ ದೊಡ್ಡ ಗಾತ್ರದ ಕಿವಿಯೋಲೆ, ಬ್ರೇಸ್ ಲೆಟ್ ಜತೆ ತಲೆಗೂದಲನ್ನು ಕರ್ಲಿಯಾಗಿ ಮಾಡಿಕೊಂಡಿದ್ದಾರೆ.

ಈ ಬಿಳಿ ಬಣ್ಣದ ವಸ್ತ್ರಧಾರೆಯಾಗಿದ್ದ ಫೋಟೋವನ್ನು ಇನ್‍ಸ್ಟಾಗೆ ಅಪ್ಲೋಡ್ ಮಾಡಿದ್ದ ಒಂದೇ ದಿನಕ್ಕೆ ಸರಿಸುಮಾರು 2.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳು, ಕಮೆಂಟ್‍ಗಳನ್ನು ಪಡೆದುಕೊಂಡಿದೆ.

ಈ ಹಿಂದೆ ಸನ್ನಿ ಲಂಡನ್‍ನಲ್ಲಿ ಕಪ್ಪು-ಬಿಳಿ ಬಣ್ಣದಲ್ಲಿ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ತನ್ನ ಇನ್ ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಸ್ಟನ್ನರ್, ಅಮೆಜಿಂಗ್, ಲವ್ಲಿ ಎಂದು ಸಾವಿರಾರೂ ಕಮೆಂಟ್‍ಗಳು ಬಂದಿದ್ದಲ್ಲದೇ, ಈ ಫೋಟೋ ಪೋಸ್ಟ್ ಮಾಡಿದ ಒಂದು ದಿನದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಗಳನ್ನು ಪಡೆದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *