ಅಂಡರ್ ವರ್ಲ್ಡ್ ನಿಂದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಹಿನ್ನಡೆ

Advertisements

ಬಾಲಿವುಡ್ ನ ಖ್ಯಾತ ನಟಿ ಸೋನಾಲಿ ಬೇಂದ್ರೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರಾಡಿದ ಆ ಮಾತುಗಳು ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಾಲಿವುಡ್ ನ ಕರಾಳ ದಿನಗಳನ್ನು ಮತ್ತೆ ನೆನಪಿಸಿವೆ. ಸೋನಾಲಿ ಬೇಂದ್ರೆ ಜೊತೆ ಸಿನಿಮಾ ರಂಗಕ್ಕೆ ಬಂದ ಅನೇಕ ನಟಿಯರಿಗೆ ಒಳ್ಳೊಳ್ಳೆ ಅವಕಾಶಗಳು ಸಿಕ್ಕವು. ಉತ್ತಮವಾಗಿಯೇ ಅವರೆಲ್ಲ ಬೆಳೆದರು. ನಟಿಸುವ ವಿಚಾರದಲ್ಲಿ ಸೋನಾಲಿಗೆ ಹಿನ್ನೆಲೆ ಆಯಿತಂತೆ. ಅದಕ್ಕೆ ಕಾರಣ ಭೂಗತ ಜಗತ್ತು ಎಂದಿದ್ದಾರೆ ನಟಿ.

Advertisements

ಭೂಗತ ಜಗತ್ತಿನ ಕಪಿಮುಷ್ಠೆಯಲ್ಲಿ ಬಾಲಿವುಡ್ ಸಿನಿಮಾ ರಂಗವಿತ್ತು. ನೇರವಾಗಿ ಅವರು ಉದ್ಯಮದಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ಪರೋಕ್ಷವಾಗಿ ಅವರು ಬಾಲಿವುಡ್ ಅನ್ನು ಹಿಡಿತದಲ್ಲಿ ತಗೆದುಕೊಂಡಿದ್ದರು. ಅವರು ಹೇಗೆ ಹೇಳುತ್ತಿದ್ದರೋ, ಹಾಗೆಯೇ ಸಾಕಷ್ಟು ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಕೇಳಬೇಕಿತ್ತು. ಈ ಕಾರಣದಿಂದಾಗಿ ನನಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ನಾನೂ ಕೂಡ ಯಾರ ದುಂಬಾಲು ಬಿದ್ದು ಅವಕಾಶಕ್ಕಾಗಿ ಕೇಳಲಿಲ್ಲ. ಪಾತ್ರಗಳು ಹೇಗೆ ಆಯ್ಕೆ ಆಗುತ್ತಿದ್ದವು ಎನ್ನುವ ಅರಿವು ನನಗಾಗಿದ್ದರಿಂದ ನಾನು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ ಎಂದಿದ್ದಾರೆ ಸೋನಾಲಿ. ಇದನ್ನೂ ಓದಿ:ಸಂಜನಾ ಗಲ್ರಾನಿ ಮಗು `ಅಲಾರಿಕ್’ ಹೆಸರಿನ ಅರ್ಥವೇನು ಗೊತ್ತಾ?

Advertisements

ಬಾಲಿವುಡ್ ಗೆ ಭೂಗತ ಜಗತ್ತಿನ ನಂಟು ಇರುವುದು ಗುಟ್ಟಿನ ವಿಚಾರವೇನೂ ಅಲ್ಲ. ಅದೆಷ್ಟೋ ನಟ, ನಟಿಯರಿಗೆ ಹಾಗೂ ನಿರ್ಮಾಪಕರಿಗೆ ರೌಡಿಗಳು ಬೆದರಿಸಿ ಹಣ ವಸೂಲಿ ಮಾಡಿದ ಉದಾಹರಣೆಗಳಿವೆ. ವಿದೇಶದಲ್ಲಿ ಕೂತು ಡಾನ್ ಅನಿಸಿಕೊಂಡವರು, ಬೆದರಿಕೆ ಹಾಕಿದ್ದನ್ನೂ ಮರೆಯುವಂತಿಲ್ಲ. ಅಲ್ಲದೇ, ಕೆಲವರು ಸಿನಿಮಾ ನಿರ್ಮಾಣಕ್ಕೂ ಹಣ ಹೂಡಿದ್ದಾರೆ ಎನ್ನುವ ಮಾತಿದೆ. ಈ ಮಧ್ಯ ಸೋನಾಲಿ ಆಡಿದ ಮಾತುಗಳು ಬಾಲಿವುಡ್ ಮತ್ತೊಂದು ಮುಖವನ್ನು ಬಿಚ್ಚಿಟ್ಟಿವೆ.

Live Tv

Advertisements
Advertisements
Exit mobile version