ಮದುವೆ ಬಳಿಕ ಆಸ್ಪತ್ರೆಗೆ ಬಂದ ಸೋನಾಕ್ಷಿ- ಹಬ್ಬಿತು ಪ್ರೆಗ್ನೆನ್ಸಿ ಸುದ್ದಿ

Public TV
1 Min Read
sonakshi sinha 1 4

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಮದುವೆಯಾಗಿ ಒಂದೇ ವಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿರುವುದು ನೆಟ್ಟಿಗರ ಚರ್ಚೆ ಗ್ರಾಸವಾಗಿದೆ. ಸೋನಾಕ್ಷಿ ಪ್ರೆಗ್ನೆನ್ಸಿ ಸುದ್ದಿ ಘೋಷಣೆ ಮಾಡುತ್ತಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

sonakshi sinha 1 3

ಹೇಳಿ ಕೇಳಿ ಬಾಲಿವುಡ್‌ನಲ್ಲಿ ಪ್ರೆಗ್ನೆಂಟ್ ಆದ್ಮೇಲೆ ಮದುವೆಯಾಗುವುದು ಟ್ರೆಂಡ್ ಆಗಿದೆ. ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್‌ ಜೋಡಿ, ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ, ಶ್ರೀದೇವಿ ಮತ್ತು ಬೋನಿ ಕಪೂರ್‌ ಜೋಡಿ ಸೇರಿದಂತೆ ಅನೇಕರು ಸೆಲೆಬ್ರಿಟಿಗಳು ಈ ಟ್ರೆಂಡ್ ಫಾಲೋ ಮಾಡಿದ್ದಾರೆ. ಇದನ್ನೂ ಓದಿ:ಮಾನ್ವಿತಾ, ಶ್ರೇಯಸ್ ಕಾಂಬಿನೇಷನ್ ನ ‘ಒನ್ ಅಂಡ್ ಹಾಫ್’ ಶೂಟಿಂಗ್ ಕಂಪ್ಲೀಟ್

sonakshi sinha 3

ಅದರಂತೆ ಸೋನಾಕ್ಷಿ, ಮತ್ತು ಝಹೀರ್ (Zaheer Iqbal) ಜೋಡಿ ಗುಡ್ ನ್ಯೂಸ್ ಕೊಡ್ತಾರಾ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇಬ್ಬರೂ ಜೂನ್ 23ರಂದು ತರಾತುರಿಯಲ್ಲಿ ಮದುವೆಯಾದರು. ಇವರ ಮದುವೆ ಗುಟ್ಟಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು. ಪ್ರೆಗ್ನೆಂಟ್ ಆದ ಕಾರಣದಿಂದಲೇ ನಟಿ ಇಷ್ಟು ಆತುರದಲ್ಲಿ ಮದುವೆಯಾದ್ರಾ? ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಉತ್ತರ ಸಿಗುತ್ತಾ ಕಾಯಬೇಕಿದೆ. ಇದನ್ನೂ ಓದಿ:ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

sonakshi sinha 1 1

ಅಂದಹಾಗೆ, 7 ವರ್ಷಗಳ ಹಿಂದೆ 2017ರ ಜೂನ್‌ 23ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಿನ್ಹಾ ಸಂಭ್ರಮಿಸಿದ್ದರು.

Share This Article