ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಇದೀಗ ಮದುವೆಯಾಗಿ ಒಂದೇ ವಾರಕ್ಕೆ ಗಂಡನ (Zaheer Iqbal) ಕೈಗೆ ಚಪ್ಪಲಿ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ:ಜೈಲಿಗೆ ದರ್ಶನ್ ಕುಟುಂಬ ಭೇಟಿ- ತಾಯಿಯನ್ನು ನೋಡ್ತಿದಂತೆ ನಟ ಕಣ್ಣೀರು
ಜೂನ್ 23ರಂದು ಝಹೀರ್ ಇಕ್ಬಾಲ್ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮದುವೆಯಾಗಿ ಒಂದು ವಾರ ಕಳೆದಿದ್ದು, ಗಂಡನ ಕೈಗೆ ಚಪ್ಪಲಿ ಕೊಟ್ಟಿದ್ದಾರೆ. ಅದನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ಹಂಚಿಕೊಂಡಿದ್ದಾರೆ. ಚೆಂದದ ಅಡಿಬರಹ ಕೂಡ ನೀಡಿದ್ದಾರೆ.
ಶಾಪಿಂಗ್ ಮಾಲ್‌ನಲ್ಲಿ ಪತಿ ಝಹೀರ್ ತನ್ನ ಚಪ್ಪಲಿ ಹಿಡಿದಿರುವ ಫೋಟೋ ಶೇರ್ ಮಾಡಿ, ಇಷ್ಟಪಟ್ಟವರನ್ನು ಮದುವೆಯಾದರೆ ಇರುತ್ತದೆ ಎಂದು ಸೋನಾಕ್ಷಿ ಅಡಿಬರಹ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ:ಪತ್ತೆದಾರಿ ಸಿನಿಮಾದಲ್ಲಿ ಆಲಿಯಾ ಭಟ್- ಜು.15ರಿಂದ ಶೂಟಿಂಗ್ ಸ್ಟಾರ್ಟ್
ಅಂದಹಾಗೆ, 7 ವರ್ಷಗಳ ಹಿಂದೆ 2017ರ ಜೂನ್ 23ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಿನ್ಹಾ ಸಂಭ್ರಮಿಸಿದ್ದರು.