ನಟಿ ಶ್ರದ್ಧಾ ಕಪೂರ್ ಪ್ರೇಮ ಪುರಾಣ ಸದ್ಯ ಬಾಲಿವುಡ್‌ನಲ್ಲಿ (Bollywood) ಭಾರೀ ಟಾಕ್ ಆಗ್ತಿದೆ. ಟೀಮ್ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ (Shreyas Iyer) ಜೊತೆ ಶ್ರದ್ಧಾ ಹೆಸರು ಸುದ್ದಿಯಾಗ್ತಿದೆ. ತನಗಿಂತ 8 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ನಟಿ ಶ್ರದ್ಧಾ ಕಪೂರ್ (Shraddha Kapoor) ಸುತ್ತಾಟ ಜೋರಾಗಿದೆ ಎಂದು ಚರ್ಚೆ ಶುರುವಾಗಿದೆ.
Advertisement
‘ಆಶಿಕಿ 2’ ನಟಿ ಶ್ರದ್ಧಾ ಹೆಸರು ಈ ಹಿಂದೆ ಹಲವರ ಜೊತೆ ಕೇಳಿ ಬಂದಿತ್ತು. ವರುಣ್ ಧವನ್, ಆದಿತ್ಯಾ ರಾಯ್ ಕಪೂರ್, ಇತ್ತೀಚೆಗೆ ರಾಹುಲ್ ಎಂಬುವರ ಜೊತೆ ಶ್ರದ್ಧಾ ಡೇಟಿಂಗ್ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಟೀಮ್ ಇಂಡಿಯಾದ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆ ಕೇಳಿ ಬಂದಿದೆ.
Advertisement
View this post on Instagram
Advertisement
ಕೆಲ ತಿಂಗಳ ಹಿಂದೆ ಮೊಬೈಲ್ ಫೋನ್‌ವೊಂದರ ಜಾಹೀರಾತು ಶೂಟಿಂಗ್‌ನಲ್ಲಿ ಮೊದಲ ಬಾರಿ ಶ್ರದ್ಧಾ ಹಾಗೂ ಶ್ರೇಯಸ್ ಜೊತೆಯಾಗಿ ನಟಿಸಿದ್ದರು. ಇದೇ ಶೂಟಿಂಗ್‌ನಲ್ಲಾದ ಪರಿಚಯ ಸ್ನೇಹಕ್ಕೆ ದಾರಿ ಮಾಡಿಕೊಟ್ಟಿತ್ತು. ಆದ್ರೀಗ ಇದೇ ಸ್ನೆಹವೇ ಪ್ರೇಮಕ್ಕೆ ತಿರುಗಿದೆ ಎನ್ನಲಾಗಿದೆ.
Advertisement
ಶೂಟಿಂಗ್‌ನಲ್ಲಿ ಪರಿಚಯವಾಗಿದ್ದ ಇವರಿಬ್ಬರು, ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಫಾಲೋ ಮಾಡ್ತಿದ್ದಾರೆ. ಸದ್ಯ ಬಾಲಿವುಡ್ ಅಂಗಳದಲ್ಲಿ ನಟಿ ಶ್ರದ್ದಾ ಕಪೂರ್ ಹಾಗೂ ಶ್ರೇಯಸ್ ಸಿಕ್ರೇಟ್ ಆಗಿ ಡೇಟಿಂಗ್ ನಡೆಸ್ತಿದ್ದಾರೆ ಎಂಬ ಗುಲ್ಲೆದಿದೆ. ರಹಸ್ಯವಾಗಿ ಕೈ ಕೈ ಹಿಡಿದು ಸುತ್ತಾಡ್ತಿದ್ದಾರೆ ಎಂಬ ಸುದ್ದಿಯಿದೆ. ಆದರೆ ಶ್ರೇಯಸ್ ಅಯ್ಯರ್‌ಗೆ ಕೇವಲ 29 ವರ್ಷ, ಶ್ರದ್ಧಾಗೆ 37 ವರ್ಷ ವಯಸ್ಸು. 8 ವರ್ಷದ ದೊಡ್ಡವಳ ಜೊತೆ ಶ್ರೇಯಸ್ ಲವ್ ಬಿದ್ದಿದ್ದಾರೆ. ಈ ವಿಚಾರ ಅದೆಷ್ಟು ನಿಜ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.