‘KD’ ಅಡ್ಡಾದಲ್ಲಿ ಸಿಗ್ತಾರಂತೆ ಗುಳಿಕೆನ್ನೆ ಚೆಲುವೆ ಶಿಲ್ಪಾ ಶೆಟ್ಟಿ

Public TV
1 Min Read
Shilpa Shetty Bollywood Silver Gown

ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ರವಿಚಂದ್ರನ್ (Ravichandran) ನಟನೆಯ  ಪ್ರೀತ್ಸೋದು ತಪ್ಪಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ನಟಿ. ಮಂಗಳೂರು ಮೂಲದವರು. 1998ರಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದರು. ಆನಂತರ ಮತ್ತೆ ರವಿಮಾಮ ಜೊತೆ ಒಂದಾಗೋಣ ಬಾ ಚಿತ್ರದಲ್ಲಿ ನಟಿಸಿದರು. 2005ರಲ್ಲಿ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದರು. ಅಲ್ಲಿಂದ ಈವರೆಗೂ ಶಿಲ್ಪಾ ಮತ್ತೆ ಕನ್ನಡದತ್ತ ಮುಖ ಮಾಡಿಲ್ಲ.

shilpa shetty

ಹದಿನೇಳು ವರ್ಷಗಳ ತರುವಾಯ ಮತ್ತೆ ಶಿಲ್ಪಾ ಹೆಸರು ಚಂದನವನದಲ್ಲಿ ಕೇಳಿ ಬರುತ್ತಿದೆ. ಗುಳಿಕೆನ್ನೆ ಚೆಲುವೆ ಶಿಲ್ಪಾ ಸ್ಯಾಂಡಲ್ ವುಡ್ ಗೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನುವ ವರ್ತಮಾನ ‘ಕೆಡಿ’ (KD) ಅಡ್ಡಾದಿಂದ ಬಂದಿದೆ. ಧ್ರುವ ಸರ್ಜಾ (Dhruva Sarja) ಮತ್ತು ಪ್ರೇಮ್ (Prem) ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಶಿಲ್ಪಾ ವಿಶೇಷ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶಿಲ್ಪಾ ಜೊತೆ ಮಾತುಕತೆ ಕೂಡ ಆಡಿದ್ದಾರಂತೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

Shilpa Shetty and Raj Kundra

ಈಗಾಗಲೇ ‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡು ಹಂತದ ಚಿತ್ರೀಕರಣಕ್ಕೂ ಅವರು ಬಂದಿದ್ದಾರೆ. ಇದೀಗ ಬಾಲಿವುಡ್ ನಿಂದ ಮತ್ತೋರ್ವ ಕಲಾವಿದರನ್ನು ಪ್ರೇಮ್ ಕರೆತರುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಎಲ್ಲ ಭಾಷೆಗೂ ಸಲ್ಲುವಂತಹ ಕಲಾವಿದರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ ಪ್ರೇಮ್.

shilpa shetty

ಅಂದುಕೊಂಡಂತೆ ನಡೆದರೆ, ರವಿಚಂದ್ರನ್ ಜೋಡಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರವಿಚಂದ್ರನ್ ಈ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಅವರ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಈ ಪಾತ್ರಕ್ಕೆ ಜೊತೆಯಾಗಿ ಶಿಲ್ಪಾ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಬಾರದೇ ಇದ್ದರೂ, ಆಪ್ತ ಮೂಲಗಳು ಈ ಸುದ್ದಿಯನ್ನು ಖಚಿತ ಪಡಿಸಿವೆ.

Share This Article
Leave a Comment

Leave a Reply

Your email address will not be published. Required fields are marked *