ನವದೆಹಲಿ: ಬಾಲಿವುಡ್ ನಟಿ ಸಾರಾ ಅಲಿಖಾನ್ ಅವರು ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಹೌದು. ಇಂದು ಅಮಿತ್ ಶಾ ಅವರ ಹುಟ್ಟುಹಬ್ಬವಾಗಿತ್ತು. ಈ ಹಿನ್ನೆಲೆಯಲ್ಲಿ ನಟಿ, ಗೃಹ ಸಚಿವರಿಗೆ ವಿಶ್ ಮಾಡಿದ್ದಾರೆ. ಆದರೆ ಇದುವರೆಗೆ ವಿಶ್ ಮಾಡಿದಿರುವ ಸಾರಾ ಈ ಬಾರಿ ಶುಭಕೋರಿರುವುದಕ್ಕೆ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಿದ್ದಾರೆ.
Advertisement
Warmest birthday wishes and regards to the Hon’ble Union Home Minister @AmitShah ji.
— Sara Ali Khan (@SaraAliKhan) October 22, 2021
Advertisement
ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ಮನೆ ಮೇಲೆ ಎನ್‍ಸಿಬಿ ದಾಳಿ ನಡೆಯುತ್ತಿದೆ. ಇದರಿಂದ ಪಾರಾಗುವ ಸಲುವಾಗಿ ಸಾರಾ ಅವರು ಅಮಿತ್ ಶಾಗೆ ವಿಶ್ ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ
Advertisement
Sara ka naam kaat do raid wali list se. pic.twitter.com/xfoTc8tFjI
— Prayag (@theprayagtiwari) October 22, 2021
Advertisement
ಸಾರಾ ಟ್ವೀಟ್ ನಲ್ಲೇನಿದೆ..?
ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಸಾರಾ ಟ್ವೀಟ್ ಮಾಡಿದ್ದಾರೆ. ನಟಿ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಒಬ್ಬರು, ‘ನಿಮ್ಮ ಮನೆ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ಮಾಡಲ್ಲ. ಈ ಮೂಲಕ ನೀವು ಸರಕ್ಷಿತವಾಗಿದ್ದೀರಿ’ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಅನೇಕರು ಸಾರಾ ಕಾಲೆಳೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
https://twitter.com/sunilssihag/status/1451430377298415622
ಇತ್ತ ಮುಂಬೈನ ಕ್ರೂಸ್‍ನಲ್ಲಿ ನಡೆದ ಡ್ರಗ್ಸ್ ಕೇಸ್ ಪ್ರಕರಣದ ಬಗ್ಗೆ ಕೆದಕಿದಷ್ಟು ಮಾಹಿತಿ ಹೊರಬರ್ತಿದೆ. ಆರ್ಯನ್ ಖಾನ್ ಜೊತೆ ವಾಟ್ಸಪ್‍ನಲ್ಲಿ ಡ್ರಗ್ಸ್ ಬಗ್ಗೆ ಚಾಟಿಂಗ್ ಮಾಡಿದ್ದಂತೆ ನಟಿ ಅನನ್ಯ ಪಾಂಡೆಗೆ ಇಂದು ಕೂಡ ಎನ್‍ಸಿಬಿ ಡ್ರಿಲ್ ಮಾಡಿತು. ನಿಮಗೆ ಯಾರು ಡ್ರಗ್ಸ್ ತಂದು ಕೊಡ್ತಿದ್ರು..? ಯಾವ್ಯಾವ ಟೈಮಲ್ಲಿ ಡ್ರಗ್ಸ್ ತಗೋತಿದ್ರಿ..? ಆರ್ಯನ್ ಜೊತೆ ಎಷ್ಟು ದಿನಗಳಿಂದ ಡ್ರಗ್ಸ್ ತೆಗೆದುಕೊಳ್ತಿದ್ದೀರಿ..? ನಿಮ್ ಜೊತೆ ಯಾರ್ಯಾರು ಡ್ರಗ್ಸ್ ತಗೋತಿದ್ರು..? ಪೆಡ್ಲರ್‍ಗೆ ಹೇಗೆ ಹಣ ಕೊಡ್ತಿದ್ರಿ..? ಯಾವ್ಯಾವ ಸ್ಥಳದಲ್ಲಿ ಪೆಡ್ಲರ್‍ನ ಭೇಟಿಯಾಗ್ತಿದ್ರಿ ಅಂತಾ ಪ್ರಶ್ನಿಸಿದ್ದಾರೆ.
https://twitter.com/Nher_who/status/1451429295012802566
ಇದಕ್ಕೆ ಉತ್ತರಿಸಿರೋ ಅನನ್ಯ ಪಾಂಡೆ, ನಾನು ಡ್ರಗ್ಸ್ ತಗೋಳಲ್ಲ. ಆರ್ಯನ್ ಜೊತೆ ಗಾಂಜಾ ಕುರಿತು ಜೋಕ್ ಮಾಡಿದ್ದೇ ಅಷ್ಟೇ. ಅದೂ 1 ಒಂದು ವರ್ಷದ ಹಿಂದಿನ ಚಾಟ್ ಅದು ಅಂತ ಹೇಳಿದ್ದಾರೆ. ಆದರೆ ಆರ್ಯನ್ ಡ್ರಗ್ಸ್ ಕೇಳಿದಾಗ, ತಂದು ಕೊಡೋದಾಗಿ ಅನನ್ಯ ಪಾಂಡೆ ಚಾಟ್‍ನಲ್ಲಿ ಹೇಳಿದ್ದಳು ಅಂತ ಎನ್‍ಸಿಬಿ ಹೇಳಿದೆ.
Isko lag rha ye tweet karne se @narcoticsbureau ise pakdegi nhi ???????????? pic.twitter.com/mWKpf2SqXf
— ReachDed (@Reachded) October 22, 2021