ಕನ್ನಡದ ‘ಗಿಲ್ಲಿ’ (Gilli Kannada Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
View this post on Instagram
ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ (Gururaj) ನಟನೆಯ ‘ಗಿಲ್ಲಿ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ರಾಕುಲ್ ಸಿನಿಪಯಣ ಶುರು ಮಾಡಿದರು. ಇದೀಗ ಸೌತ್-ಬಾಲಿವುಡ್ ರಂಗದಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚ್ತಿದ್ದಾರೆ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಮದುವೆಗೆ ಕಿಚ್ಚ ಕೊಟ್ಟ ಉಡುಗೊರೆ ಏನು?
View this post on Instagram
ಸದ್ಯ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೆಲ ದಿನಗಳಿಂದ ನಟಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಬಿಕಿನಿಯ ಹಸಿ ಬಿಸಿ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಈಗ ಮತ್ತೆ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ. ರೆಡ್ ಕಲರ್ ಬಿಕಿನಿ (Bikini) ಧರಿಸಿ ಬೀಚ್ ಬಳಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಈ ಫೋಟೋಗಳು ಎಲ್ಲೆಡೆ ಸದ್ದು ಮಾಡುತ್ತಿದೆ.
View this post on Instagram
ಇನ್ನೂ ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ರಾಕುಲ್ ಡೇಟ್ ಮಾಡ್ತಿದ್ದಾರೆ. ಸದ್ಯ ಸ್ಟಾರ್‌ಗಳ ಮದುವೆ ಸೀಸನ್ ನಡೆಯುತ್ತಿರುವ ಕಾರಣ, ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.