– ‘ಪಾಕ್ ಜನರೇ, ನಾನು ನಿಮ್ಮೊಂದಿಗೆ ಇದ್ದೇನೆ’ ಎಂದ ನಟಿ ವಿರುದ್ಧ ಜನಾಕ್ರೋಶ
ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡೋ ರಾಖಿ ಸಾವಂತ್ (Rakhi Sawant) ಇದೀಗ ಪಾಕ್ ಪರ ಮಾತನಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ವಾತಾವರಣ ನಡುವೆ ರಾಖಿ ಸಾವಂತ್ ಪಾಕ್ ಪರ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ:ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾನು ರಾಖಿ ಸಾವಂತ್, ನಾನು ಸತ್ಯವನ್ನೇ ಮಾತನಾಡುತ್ತೇನೆ. ಸತ್ಯವನ್ನು ಬಿಟ್ಟು ಬೇರೆ ಏನು ಹೇಳುವುದಿಲ್ಲ. ಪಾಕಿಸ್ತಾನದ ಜನರೇ, ನಾನು ನಿಮ್ಮೊಂದಿಗೆ ಇದ್ದೇನೆ ‘ಜೈ ಪಾಕಿಸ್ತಾನ’ (Pakistan) ಎಂದು ಹೇಳಿದ್ದಾರೆ.
Anti-nationals and traitors like Rakhi Sawant should be immediately expelled from India and sent to Pakistan.
A despicable woman like Rakhi Sawant raises slogans in support of Pakistan while living in India.@SAW_Rakhi1 pic.twitter.com/97BDKWS4pn
— Aditya Kumar Trivedi (@adityasvlogs) May 4, 2025
ಭಾರತದಲ್ಲಿದ್ದು ಭಾರತೀಯಳಾಗಿ ಪಾಕ್ ಪರ ಧ್ವನಿಯೆತ್ತಿದ ರಾಖಿ ಸಾವಂತ್ ವಿರುದ್ಧ ಅನೇಕರು ಕೆಂಡಕಾರಿದ್ದಾರೆ. ಈ ಹಿನ್ನೆಲೆ ರಾಖಿ ಸಾವಂತ್ ಅವರನ್ನು ದೇಶದಿಂದ ಓಡಿಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಎದುರಾಳಿ ದೇಶದ ಪರ ರಾಖಿ ಮಾತನಾಡುತ್ತಾ ಅವರ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಅವರನ್ನು ಭಾರತದಿಂದ ಹೊರಹಾಕಬೇಕು ಎಂದು ಮಹಾರಾಷ್ಟç ನವನಿರ್ಮಾಣ್ ಸೇನಾ ಕಾರ್ಯಕರ್ತ ಅನೀಶ್ ಖಂಡಗಾಲೆ ಖಂಡಿಸಿದ್ದಾರೆ. ಇದನ್ನೂ ಓದಿ:’ಡ್ರ್ಯಾಗನ್’ ಸಕ್ಸಸ್ ಬೆನ್ನಲ್ಲೇ ಸ್ಟಾರ್ ನಟನಿಗೆ ಕಯಾದು ಲೋಹರ್ ಜೋಡಿ
ಇದೀಗ ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ರಾಖಿ ವಿರುದ್ಧ ಕಿಡಿಕಾರಿದ್ದಾರೆ. ಇದು ದೇಶದ್ರೋಹ ಕೆಲಸ, ರಾಖಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ.