ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್‌ನ ‘ಸಿಟಾಡೆಲ್’ (Citadel) ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಿಂದ ಹಿಂದಿರುಗಿದ ಬೆನ್ನಲ್ಲೇ ಸಿನಿಮಾ ಕೆಲಸಗಳಲ್ಲಿ ತೊಡಗಿದ್ದಾರೆ. ಈಗ ತಮ್ಮ ಖಾಸಗಿ ವಿಚಾರವಾಗಿ ನಟಿ ಸುದ್ದಿಯಾಗಿದ್ದಾರೆ. ಮುಂಬೈನಲ್ಲಿರುವ 7 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಿಯಾಂಕಾ ಚೋಪ್ರಾ ಮಾರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕಾ ವಿವಾದದ ಕಾರಣದಿಂದ ಸುದ್ದಿ ಆಗಿದ್ದಾರೆ. ತುಂಬ ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ ಈಗ ಮಾತನಾಡಿದ್ದಕ್ಕಾಗಿ ಅವರು ನಟಿ ಟೀಕೆಗೆ ಒಳಗಾದರು. ಈ ಬಗ್ಗೆ ಪರ- ವಿರೋಧದ ಚರ್ಚೆಯಾಗಿತ್ತು. ಈ ಎಲ್ಲ ಕಿರಿಕ್‌ಗಳ ಬೆನ್ನಲ್ಲೇ ಅವರೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬೈನಲ್ಲಿ ತಮಗೆ ಸೇರಿದ ಆಸ್ತಿಯೊಂದನ್ನು ಅವರು ಮಾರಿದ್ದಾರೆ. ಬರೋಬ್ಬರಿ 7 ಕೋಟಿ ರೂಪಾಯಿ ಬೆಲೆ ಬಾಳುವ ಪ್ರಾಪರ್ಟಿಯನ್ನು (Property) ಅವರು ಮಾರಾಟ ಮಾಡಿದ್ದಾರೆ. ಈ ಮೂಲಕ ಅವರು ಶಾಶ್ವತವಾಗಿ ಮುಂಬೈ (Mumbai) ಜೊತೆಗಿನ ನಂಟಿಗೆ ವಿದಾಯ ಹೇಳುತ್ತಾರಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: Hombale Films ನಿರ್ಮಾಣದ ‘ಧೂಮಂ’ ಫಸ್ಟ್ ಲುಕ್ ಔಟ್
ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ 2018ರಲ್ಲಿ ಅಮೆರಿಕಕ್ಕೆ ಶಿಫ್ಟ್ ಆದರು. ಈಗ ಅವರು ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾಗಳಿಂದ ಅವರಿಗೆ ಅವಕಾಶಗಳು ಸಿಗುತ್ತಿವೆ. ಸದ್ಯ ಅವರು ಹಿಂದಿಯಲ್ಲಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಸಂಪೂರ್ಣ ಗಮನ ಹಾಲಿವುಡ್ ಮೇಲಿದೆ. ಇಷ್ಟು ವರ್ಷಗಳ ಕಾಲ ಆ ಜಾಗವನ್ನು ಅವರು ಬಾಡಿಗೆಗೆ ನೀಡಿದ್ದರು. ಆದರೆ ಈಗ ಮಾರಾಟ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಪರವಾಗಿ ಅವರ ತಾಯಿ ಮಧು ಚೋಪ್ರಾ ಮನೆ ಮಾರಾಟದ ವ್ಯವಹಾರ ನಡೆಸಿದ್ದಾರೆ.
ನಟಿಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಮುಂಬೈ ನಗರದ ಜೊತೆ ವಿಶೇಷ ನಂಟು ಇದೆ. ಅವರ ಬಾಲ್ಯ, ವೃತ್ತಿ ಜೀವನ, ಸೋಲು- ಗೆಲುವು ಈ ಎಲ್ಲವನ್ನು ಅವರು ನೋಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದ ಅವರು ಕೆಲವು ದಿನಗಳ ಕಾಲ ಇಲ್ಲಿಯೇ ಉಳಿದುಕೊಂಡಿದ್ದರು. ಮಗಳು ಮಾಲ್ತಿ ಮೇರಿ ಜೊತೆ ಅವರು ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.