BollywoodCinemaLatestMain Post

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಸಂದರ್ಶಿಸಿದ ಬಾಲಿವುಡ್ ನಟಿ ಪಿಗ್ಗಿ

ಬಾಲಿವುಡ್ (Bollywood) ಸಿನಿಮಾ ರಂಗದಿಂದಲೇ ದೂರ ಉಳಿದಿರುವ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜಾಗತಿಕ ಮಟ್ಟದ ವಾಹಿನಿಯೊಂದಕ್ಕೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಅಮೆರಿಕನ್ (America) ಟಿವಿ ಶೋ ಕ್ವಾಂಟಿಕೋದಲ್ಲಿ ಪ್ರಸಿದ್ಧ ವ್ಯಕ್ತಿಗಳನ್ನು ಸಂದರ್ಶಿಸುತ್ತಾರೆ. ಈ ಬಾರಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರನ್ನು ಸಂದರ್ಶಿಸಿದ್ದಾರೆ (Interview). ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶುಕ್ರವಾರ ಈ ಕಾರ್ಯಕ್ರಮ ನಡೆದಿದ್ದು, ಯುಎಸ್.ಎ ಬಂದೂಕು ಹಕ್ಕು, ವೇತನ ಸಮಾನತೆ ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಬದುಕಿನಲ್ಲೂ ನಡೆದ ಹಲವು ಘಟನೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದು, ತಾವೂ ಕೂಡ ವೇತ ತಾರತಮ್ಯವನ್ನು ಎದುರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಎರಡು ದಶಕದ ನಂತರ ತಾವು ಸಹ ನಟನ ಸಮಾನ ವೇತನವನ್ನು ಪಡೆದಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಮಲಾ ಹ್ಯಾರಿಸ್ ಜೊತೆ ಗರ್ಭಪಾತ ಕಾನೂನುಗಳ ಬಗ್ಗೆಯೂ ಮಾತನಾಡಿರುವ ಪ್ರಿಯಾಕಾ, ಇತ್ತೀಚೆಗಷ್ಟೇ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೇ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಿರುವ ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಸ್ವಾಗತಿಸಿ, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಶನದ ಫೋಟೋಗಳನ್ನು ಮತ್ತು ವೈಟ್ ಹೌಸ್ ನ ಚಿತ್ರಗಳನ್ನು ಅವರು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ.

ಸದ್ಯ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರೀಯರಾಗಿಲ್ಲ. ಆದರೂ, ಅವರು ಟಿವಿ ಶೋನಿಂದಾಗಿ ಜಗತ್ತಿನ ಅನೇಕ ದಿಗ್ಗಜರ ಜೊತೆ ಒಡನಾಟ ಬೆಳೆಸಿದ್ದಾರೆ. ಪತಿ ನಿಕ್ ಜೋನಾಸ್ ಮತ್ತು ಮಗುವಿನ ಜೊತೆ ಕ್ವಾಲಿಟಿ ಟೈಮ್ ಅನ್ನು ಕಳೆಯುತ್ತಿದ್ದಾರೆ. ಮತ್ತೆ ಸಿನಿಮಾ ರಂಗಕ್ಕೆ ಬರುವ ಆಸೆಯನ್ನು ಪಿಗ್ಗಿ ವ್ಯಕ್ತ ಪಡಿಸಿದ್ದು, ಫರ್ಹಾನ್ ಅಖ್ತರ್ ನಟನೆಯ ಚಿತ್ರದ ಮೂಲಕ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Live Tv

Leave a Reply

Your email address will not be published. Required fields are marked *

Back to top button