ಲಕ್ಷ ದ್ವೀಪದ ಬಗ್ಗೆ ಬಾಲಿವುಡ್ ನಟಿ ಪೂನಂ ಪಾಂಡೆ ಭಿನ್ನ ಹೇಳಿಕೆ

Public TV
1 Min Read
poonam pandey 3 1

ಪ್ರಧಾನಿ ನರೇಂದ್ರ ಮೋದಿ ಲಕ್ಷ ದ್ವೀಪಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅದು ವಿವಾದವಾಗಿ ಮಾರ್ಪಟ್ಟಿತು. ಮಾಲ್ಡೀವ್ಸ್ ಸಚಿವರು ಮೋದಿಯ ಲಕ್ಷ ದ್ವೀಪದ ಭೇಟಿಯನ್ನು ವಿವಾದವಾಗಿ ರೂಪಾಂತರಿಸಿದರು. ಅದಕ್ಕ ತಕ್ಕ ಪಾಠವನ್ನು ಅವರು ಕಲಿತಾಗಿದೆ. ಇದೆಲ್ಲ ಆದ ಬೆನ್ನಲ್ಲೇ ಅನೇಕರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿ, ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಕೂಡ ಒಬ್ಬರು.

poonam pandey 2 1

ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೆಲವು ದಿನಗಳ ಬಳಿಕ ಮಾಲ್ಡೀವ್ಸ್‌ (Maldives) ಸಚಿವರು, ಭಾರತವು ಮಾಲ್ಡೀವ್ಸ್‌ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಭಾರತವು ಮಾಲ್ಡೀವ್ಸ್‌ ಅನ್ನು ಟಾರ್ಗೆಟ್ ಮಾಡುತ್ತಿದೆ. ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ (Maldives Beach Tourism) ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದರು. ಆದ್ರೆ ಸಚಿವರು ಮಾಡಿರುವ ಅವಹೇಳನಾಕಾರಿ ಟ್ವೀಟ್‌ಗೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

poonam pandey 1

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂಡಮಾನ್ ಮತ್ತು ಉಡುಪಿ ಬೀಚ್ ಗಳ ಫೋಟೋ ಹಾಕಿ, ಮಾಲ್ಡೀವ್ಸ್  ವಿರುದ್ಧ ಹರಿಹಾಯ್ದಿದ್ದರು. ಅದಕ್ಕೆ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೂನಂ ಪಾಂಡೆ ಕೂಡ ಪೋಸ್ಟ್ ಮಾಡಿದ್ದಾರೆ.

ಈವರೆಗೂ ಪೂನಂ ಪಾಂಡೆ ಮಾಲ್ಡೀವ್ಸ್ ನಲ್ಲಿ ತಮ್ಮ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರಂತೆ. ಈಗಲೂ ಫೋಟೋ ಶೂಟ್ ಗಾಗಿ ಬುಕ್ ಕೂಡ ಮಾಡಿದ್ದರು. ಎಲ್ಲವನ್ನೂ ಪೂನಂ ಕ್ಯಾನ್ಸಲ್ ಮಾಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಮುಂದೆ ಅವರು ಲಕ್ಷ ದ್ವೀಪದಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

Share This Article