ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ತಂದೆ ಅನಿಲ್ (Anil) ಅಂತ್ಯಕ್ರಿಯೆ ಇಂದು (ಸೆ.12) ನೆರವೇರಿದೆ. ಪಂಜಾಬಿ ಸಂಪ್ರದಾಯದಂತೆ ಅನಿಲ್ ಅಂತ್ಯಸಂಸ್ಕಾರ ಮಾಡಲಾಗಿದೆ. ಇದನ್ನೂ ಓದಿ:ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ: ರಕುಲ್ ಪ್ರೀತ್ ಸಿಂಗ್
ಮಲೈಕಾ ಅರೋರಾ ತಂದೆ ಅನಿಲ್ ಸೆ.11ರಂದು ಬೆಳಗ್ಗೆ ಆತ್ಯಹತ್ಯೆಗೆ ಶರಣಾದರು. ಮುಂಬೈನಲ್ಲಿರುವ ಬಾಂದ್ರಾದ ತಮ್ಮ ಮನೆಯ ಟೆರೇಸ್‌ನಿಂದ ಹಾರಿ ಆತ್ಯಹತ್ಯೆ ಮಾಡಿಕೊಂಡರು. ತಮ್ಮ ಮನೆಯ 7ನೇ ಮಹಡಿಯಿಂದ ಬಿದ್ದು ಮಲೈಕಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸಾವಿನ ದುಃಖದಲ್ಲಿದ್ದ ಮಲೈಕಾಗೆ ಮಾಜಿ ಪತಿ ಅರ್ಬಾಜ್ ಖಾನ್ ಸಂತಾಪ ಸೂಚಿಸಿದರು. ಬಾಲಿವುಡ್‌ನ ಹಲವು ನಟ-ನಟಿಯರು ಭೇಟಿ ನೀಡಿದ್ದು, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ, ಸೈಫ್ ಅಲಿ ಖಾನ್ ಭೇಟಿ ನೀಡಿ ಸಂತಾಪ ಸೂಚಿಸಿದರು. ಜೊತೆಗೆ ನಟಿಯ ಎಕ್ಸ್ ಬಾಯಫ್ರೆಂಡ್ ಅರ್ಜುನ್ ಕಪೂರ್ ಕೂಡ ಭೇಟಿ ನೀಡಿದ್ದರು.
ಇತ್ತೀಚಿಗಷ್ಟೇ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಅವರ ಮಧ್ಯೆ ಬ್ರೇಕಪ್ ಆಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ರೂಮರ್ಸ್ ಹಬ್ಬಿಕೊಂಡಿತ್ತು. ಬ್ರೇಕಪ್ ರೂಮರ್ ನಡುವೆಯೇ ಮಲೈಕಾ ಅರೋರಾ ತಂದೆಯ ಸಾವಿನ ಸುದ್ದಿ ತಿಳಿದು, ಮುಂಬೈ ನಿವಾಸಕ್ಕೆ ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದರು.